ನವದೆಹಲಿ: ಏಕದಿನ ಕ್ರಿಕೆಟ್ ನಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಲು ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾಗೆ 46 ರನ್ ಬೇಕಾಗಿದೆ.ಏಕದಿನ ಕ್ರಿಕೆಟ್ ನಲ್ಲಿ 199 ಇನಿಂಗ್ಸ್ ಆಡಿರುವ ರೋಹಿತ್ ಇದುವರೆಗೆ 7954 ರನ್ ಗಳಿಸಿದ್ದಾರೆ. ಇನ್ನು 46 ರನ್ ಗಳಿಸಿದರೆ ಅವರು 8000 ರನ್ ಕ್ಲಬ್ ಗೆ ಸೇರ್ಪಡೆಯಾಗಲಿದ್ದಾರೆ.ಇದರೊಂದಿಗೆ ಭಾರತದ ಪರ 8000 ಪ್ಲಸ್ ಏಕದಿನ ರನ್ ಗಳಿಸಿದ ಗಂಗೂಲಿ, ಸಚಿನ್, ವಿರಾಟ್ ಕೊಹ್ಲಿ ಮುಂತಾದವರ ಸಾಲಿಗೆ ಅವರು ಸೇರ್ಪಡೆಯಾಗಲಿದ್ದಾರೆ.