Widgets Magazine

ಪವರ್ ಕಟ್ ಬಗ್ಗೆ ಟೀಕಿಸಿ ಟ್ರೋಲ್ ಗೊಳಗಾದ ಸಾಕ್ಷಿ ಧೋನಿ

ರಾಂಚಿ| Krishnaveni K| Last Modified ಭಾನುವಾರ, 22 ಸೆಪ್ಟಂಬರ್ 2019 (09:09 IST)
ರಾಂಚಿ: ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಧೋನಿ ವಿದ್ಯುತ್ ಕಡಿತದ ಬಗ್ಗೆ ಟೀಕಿಸಿ ಟ್ವೀಟ್ ಮಾಡಿದ್ದಕ್ಕೆ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ.

 
ತಮ್ಮ ನಿವಾಸದಲ್ಲಿ ಐದು ಗಂಟೆಗಳಿಂದ ವಿದ್ಯುತ್ ಇಲ್ಲ ಎಂದು ಸಾಕ್ಷಿ ಫೋಟೋ ಸಮೇತ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರು ನೀವು ಪೇಪರ್ ಓದಲ್ವಾ? ನಿನ್ನೆಯೇ ಈ ಬಗ್ಗೆ ವಿದ್ಯುತ್ ಇಲಾಖೆ ನೋಟಿಸ್ ನೀಡಿತ್ತಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ.
 
ಇನ್ನು ಕೆಲವರು ಈ ಟ್ವೀಟ್ ಬಿಜೆಪಿ ಸರ್ಕಾರದ ವಿರುದ್ಧವಾ ಎಂದರೆ ಮತ್ತೆ ಕೆಲವರು ವಿದ್ಯುತ್ ಯಾವತ್ತೂ ನೀಡಿದರೆ ಧೋನಿ ಭಾಯಿ ಬ್ರಾಂಡ್ ಅಂಬಾಸಿಡರ್ ಆಗಿರುವ ಇನ್ ವರ್ಟರ್ ಮಾರಾಟವಾಗೋದು ಹೇಗೆ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ, ಅಂತೂ ನಿಮಗೂ ಸಾಮಾನ್ಯ ಜನರ ಕಷ್ಟ ಅರ್ಥ ಆಯ್ತಲ್ವಾ. ವಿಐಪಿ ಸಂಸ್ಕೃತಿ ಬಿಟ್ಟು ಹೊರಬಂದು ನೋಡಿದ್ದು ಒಳ್ಳೆದಾಯ್ತು ಎಂದೂ ವ್ಯಂಗ್ಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :