ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಮೊದಲು ಸಾನಿಯಾ ಮಿರ್ಜಾ ಟ್ವಿಟರ್ ಬಂದ್ ಮಾಡಿದ್ದೇಕೆ?!

ಹೈದರಾಬಾದ್‍| Krishnaveni K| Last Modified ಬುಧವಾರ, 19 ಸೆಪ್ಟಂಬರ್ 2018 (15:46 IST)
ಹೈದರಾಬಾದ್‍: ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯೂ ಆಗಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಾತ್ಕಾಲಿಕವಾಗಿ ಟ್ವಿಟರ್ ನಿಂದ ದೂರವಿರುವುದಾಗಿ ಘೋಷಿಸಿದ್ದಾರೆ.


ಇದಕ್ಕೆ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವೆ ಇದೀಗ ಕೆಲವೇ ಕ್ಷಣಗಳಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ.
ಭಾರತ-ಪಾಕ್ ನಡುವೆ ಪಂದ್ಯ ನಡೆಯುವಾಗಲೆಲ್ಲಾ ಟ್ರೋಲಿಗರು ಸಾನಿಯಾ ಪಾಕ್ ಸೊಸೆ ಎಂಬ ಕಾರಣಕ್ಕೆ ಟ್ರೋಲ್ ಮಾಡುತ್ತಾರೆ. ಅಥವಾ ಸಾನಿಯಾ ಪಂದ್ಯದ ಬಗ್ಗೆ ಮಾಡುವ ಟ್ವೀಟ್ ನ್ನು ನೆಪ ಇಟ್ಟುಕೊಂಡು ಲೇವಡಿ ಮಾಡುತ್ತಾರೆ.


ಇದೇ ಕಾರಣಕ್ಕೆ ಯಾವುದೇ ವಿವಾದವೂ ಬೇಡ ಎಂದು ಸಾನಿಯಾ ಕೆಲವು ದಿನಗಳ ಮಟ್ಟಿಗೆ ಟ್ವಿಟರ್ ನಿಂದ ದೂರವಿರಲು ನಿರ್ಧರಿಸಿದ್ದಾರೆ! ಈ ಬಗ್ಗೆ ಟ್ವೀಟ್ ಮಾಡಿರುವ ಸಾನಿಯಾ ‘ಈ ಪಂದ್ಯ ಕೆಲವೇ ಕ್ಷಣಗಳಲ್ಲಿ ನಡೆಯಲಿದೆ. ಇದಕ್ಕಿಂತ ಮೊದಲು ಟ್ವಿಟರ್ ಸೈನ್ ಔಟ್ ಮಾಡಿ ಕೂರುವುದೇ ಲೇಸು. ಇಲ್ಲಿ ಬರುವ ಕೆಲವು ಅನಗತ್ಯ ಕಾಮೆಂಟ್ ಗಳನ್ನು ನೋಡಿದರೆ ಸಾಮಾನ್ಯ ವ್ಯಕ್ತಿಗಳಿಗೂ ರೋಗ ಹಿಡಿಯುವುದು ಗ್ಯಾರಂಟಿ. ಕೆಲವು ದಿನಗಳ ಮಟ್ಟಿಗೆ ಕೇವಲ ‘ಗರ್ಭಿಣಿ’ ಮಹಿಳೆಯಾಗಿರುತ್ತೇನೆ. ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವಿರುತ್ತೇನೆ’ ಎಂದು ಸಾನಿಯಾ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :