Widgets Magazine

ಏಕಕಾಲಕ್ಕೆ ಗಾಯ ಮಾಡಿಕೊಂಡ ರೋಹಿತ್, ಶಿಖರ್ ಧವನ್

ರಾಜ್ ಕೋಟ್| Krishnaveni K| Last Modified ಶನಿವಾರ, 18 ಜನವರಿ 2020 (10:19 IST)
ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಏಕಕಾಲಕ್ಕೆ ಗಾಯ ಮಾಡಿಕೊಂಡಿದ್ದಾರೆ.

 
ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಶಿಖರ್ ಧವನ್ ಪಕ್ಕೆಲುಬಿಗೆ ಬಾಲ್ ತಗುಲಿ ನೋವು ಅನುಭವಿಸಿದರು. ಆದರೆ ಇದು ಗಾಯ ಗಂಭೀರವಲ್ಲ ಎಂದು ಅವರೇ ಹೇಳಿಕೆ ನೀಡಿದ್ದಾರೆ.
 
ಇನ್ನೊಂದೆಡೆ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಕೂಡಾ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದು, ರೋಹಿತ್ ಗಾಯ ಗಂಭೀರವಲ್ಲ, ಅಂತಿಮ ಪಂದ್ಯಕ್ಕೆ ಆಡಲಿದ್ದಾರೆ ಎಂದಿದ್ದಾರೆ. ನಾಳೆ ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಈ ಇಬ್ಬರೂ ಆರಂಭಿಕರ ಉಪಸ್ಥಿತಿ ಭಾರತಕ್ಕೆ ಅನಿವಾರ್ಯವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :