ವಿರಾಟ್ ಕೊಹ್ಲಿ-ಆಂಡರ್ಸನ್ ಕಾಳಗ ನೋಡಲು ಸಿದ್ಧರಾದ ಫ್ಯಾನ್ಸ್

ಟ್ರೆಂಟ್ ಬ್ರಿಡ್ಜ್| Krishnaveni K| Last Modified ಬುಧವಾರ, 4 ಆಗಸ್ಟ್ 2021 (12:18 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮತ್ತು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ನಡುವಿನ ಕಾಳಗ ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ.
 

ಸ್ಟಾರ್ ಬ್ಯಾಟ್ಸ್ ಮನ್ ಮತ್ತು ಸ್ಟಾರ್ ಬೌಲರ್ ನಡುವಿನ ಗುದ್ದಾಟ ಯಾವತ್ತೂ ರೋಚಕವಾಗಿರುತ್ತದೆ. ಕೊಹ್ಲಿ ವಿಶ್ವದ ಸಮಕಾಲೀನ ದಿಗ್ಗಜನೆನಿಸಿಕೊಂಡರೂ ಆಂಡರ್ಸನ್ ವಿರುದ್ಧ ಇಂಗ್ಲೆಂಡ್ ನಲ್ಲಿ ಯಶಸ್ಸು ಕಾಣಲು ಹೆಣಗಾಡುತ್ತಾರೆ. ಜೊತೆಗೆ ಈಗ ಕೊಹ್ಲಿ ಫಾರ್ಮ್ ಕೊಂಚ ಕಳೆಗುಂದಿದೆ.
 
ಹೀಗಾಗಿ ಕೊಹ್ಲಿ ತಮ್ಮ ಬದ್ಧ ಎದುರಾಳಿಯನ್ನು ಯಾವ ರೀತಿ ಎದುರಿಸುತ್ತಾರೆ ಎಂಬ ಕುತೂಹಲವಿದೆ. ಒಂದು ವೇಳೆ ಕೊಹ್ಲಿ ಫಾರ್ಮ್ ಕಂಡುಕೊಳ್ಳದೇ ಹೋದರೆ ಭಾರತದ ಬ್ಯಾಟಿಂಗ್ ಇಂಗ್ಲೆಂಡ್ ನಲ್ಲಿ ದುರ್ಬಲವಾಗಲಿದೆ. ಹೀಗಾಗಿ ಕೊಹ್ಲಿ ಎದುರಾಳಿ ಆಂಡರ್ಸನ್ ಮತ್ತು ಇತರ ಇಂಗ್ಲೆಂಡ್ ವೇಗಿಗಳ ವಿರುದ್ಧ ಮೇಲುಗೈ ಸಾಧಿಸುವುದು ಮುಖ್ಯವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :