Widgets Magazine

ನಂ.1 ಬ್ಯಾಟ್ಸ್ ಮನ್ ಪಟ್ಟ ಕಳೆದುಕೊಂಡ ವಿರಾಟ್ ಕೊಹ್ಲಿ

ದುಬೈ| Krishnaveni K| Last Modified ಬುಧವಾರ, 4 ಸೆಪ್ಟಂಬರ್ 2019 (09:03 IST)
ದುಬೈ: ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇದುವರೆಗೆ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಪಟ್ಟ ಕಳೆದುಕೊಂಡಿದ್ದಾರೆ.

 
ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಅರ್ಧಶತಕ ಗಳಿಸಿದ್ದರೂ, ದ್ವಿತೀಯ ಟೆಸ್ಟ್ ನಲ್ಲಿ ವಿಫಲವಾಗಿದ್ದರು. ಹೀಗಾಗಿ ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
 
ನಂ.1 ಪಟ್ಟ ಈಗ ಆಶಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಪಾಲಾಗಿದೆ. ಆದರೆ ಇಬ್ಬರಿಗೂ ಕೇವಲ 1 ಅಂಕದ ವ್ಯತ್ಯಾಸವಿದೆಯಷ್ಟೇ. ಅಕ್ಟೋಬರ್ 2 ರಿಂದ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಬೇಕಿದ್ದು, ಆಗ ಕೊಹ್ಲಿಗೆ ಮತ್ತೆ ನಂ.1 ಪಟ್ಟ ಪಡೆಯುವ ಅವಕಾಶವಿರುತ್ತದೆ.
ಇದರಲ್ಲಿ ಇನ್ನಷ್ಟು ಓದಿ :