ಗಂಗೂಲಿ ಕಾಮೆಂಟರಿ ಮಾಡುತ್ತಿದ್ದರೆ ಎದುರಾಳಿಗಳಿಗೆ ಕೋಚ್ ಬೇಕಾಗಿಲ್ಲ!

ಲಂಡನ್, ಶುಕ್ರವಾರ, 28 ಜೂನ್ 2019 (09:59 IST)

ಲಂಡನ್: ಭಾರತ ಆಡುವ ಪಂದ್ಯಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕಾಮೆಂಟರಿ ಮಾಡುತ್ತಿದ್ದರೆ ಎದುರಾಳಿಗಳಿಗೆ ಕೋಚ್ ಗಳ ಅಗತ್ಯವೇ ಇರದು!
 


ಹೀಗಂತ ಟ್ವಿಟರಿಗರು ಈಗ ಲೇವಡಿ ಮಾಡುತ್ತಿದ್ದಾರೆ. ಕಾರಣ ಕಾಮೆಂಟರಿ ಮಾಡುವ ಗಂಗೂಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡುವುದು ಹೇಗೆಂದು ಕರಾರುವಾಕ್ ಆಗಿ ಹೇಳುತ್ತಲೇ ಇರುತ್ತಾರೆ. ವಿಪರ್ಯಾಸವೆಂದರೆ ಗಂಗೂಲಿ ಹಾಗೆ ಹೇಳಿದ ಮರುಕ್ಷಣವೇ ಟೀಂ ಇಂಡಿಯಾ ವಿಕೆಟ್ ಕಳೆದುಕೊಳ್ಳುತ್ತದೆ.
 
ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾರನ್ನು ಕಟ್ಟಿ ಹಾಕುವುದು ಹೇಗೆ ಎಂದು ಗಂಗೂಲಿ ವಿವರಿಸುತ್ತಿದ್ದರು. ರೋಹಿತ್ ಗೆ ವಿಕೆಟ್ ಆಸುಪಾಸಿನಲ್ಲೇ ಬಾಲ್ ಎಸೆಯುತ್ತಿದ್ದರೆ ಅವರ ವಿಕೆಟ್ ಕೀಳಬಹುದು ಎಂದು ಗಂಗೂಲಿ ಹೇಳಿದ್ದೇ ತಡ ವಿಂಡೀಸ್ ಬೌಲರ್ ಹೀಗೇ ಬಾಲ್ ಎಸೆದು ರೋಹಿತ್ ವಿಕೆಟ್ ಕಬಳಿಸಿದ್ದರು. ಇದನ್ನು ನೋಡಿ ರೋಹಿತ್ ಅಭಿಮಾನಿಗಳು ಗಂಗೂಲಿಯನ್ನು ಲೇವಡಿ ಮಾಡಿದ್ದಾರೆ. ಇದು ಕಾಕತಾಳೀಯವೇ ಇರಬಹುದು. ಆದರೆ ಗಂಗೂಲಿ ಮಾತ್ರ ರೋಹಿತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ನಿಜ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಬೆನ್ನಲ್ಲೇ ಮುರಿದ ಧೋನಿ

ಲಂಡನ್: ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ...

news

ವಿಶ್ವಕಪ್ 2019: ಸೆಮಿಫೈನಲ್ ಗೇರಲು ಟೀಂ ಇಂಡಿಯಾಕ್ಕೆ ಇನ್ನೊಂದೇ ಹೆಜ್ಜೆ

ಲಂಡನ್: ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಗೆಲುವಿನ ನಾಗಲೋಟ ಮುಂದುವರಿಸಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ...

news

ದೃಷ್ಟಿಹೀನ ಪುತ್ರನಿಗೆ ವಿಶ್ವಕಪ್ ಪಂದ್ಯದ ಕ್ಷಣ ಕ್ಷಣದ ವಿವರಣೆ ನೀಡುತ್ತಿರುವ ತಾಯಿ

ಲಂಡನ್: ಕ್ರಿಕೆಟ್ ಅಭಿಮಾನಿಯಾಗಿರುವ ದೃಷ್ಟಿಹೀನ ಪುತ್ರನಿಗೆ ಪಂದ್ಯದ ಪ್ರತಿ ಕ್ಷಣಕ್ಷಣದ ಮಾಹಿತಿಯನ್ನು ...

news

ವಿಶ್ವಕಪ್ 2019: ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ ಯಾರು ಇನ್ ಯಾರು ಔಟ್?

ಲಂಡನ್: ವಿಶ್ವಕಪ್ 2019 ರ ಇಂದಿನ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿದ್ದು, ...