Widgets Magazine

ವಿಶ್ವಕಪ್ ಕ್ರಿಕೆಟ್ 2019: ವಿರಾಟ್ ಕೊಹ್ಲಿಗೆ ವಿಶ್ವದಾಖಲೆ ಮಾಡುವ ಅವಕಾಶ

ಲಂಡನ್| Krishnaveni K| Last Updated: ಬುಧವಾರ, 26 ಜೂನ್ 2019 (16:50 IST)
ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ನಾಳೆ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾಖಲೆಯೊಂದನ್ನು ಮಾಡುವ ಅವಕಾಶ ಎದುರಾಗಿದೆ.
 

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ 20000 ಅಂತರಾಷ್ಟ್ರೀಯ ರನ್ ಗಳಿಸಲು ಇನ್ನು 35 ರನ್ ದೂರದಲ್ಲಿದ್ದಾರೆ. ಕೊಹ್ಲಿಯ ಪ್ರಸ್ತುತ ಫಾರ್ಮ್ ಗಮನಿಸಿದರೆ ಇದು ಅಸಂಭವವೇನೂ ಅಲ್ಲ. ಕಳೆದ ಪಂದ್ಯವೂ ಸೇರಿದಂತೆ ಇದುವರೆಗೆ ಈ ವಿಶ್ವಕಪ್ ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಕೊಹ್ಲಿ 50 ಪ್ಲಸ್ ರನ್ ಗಳಿಸಿದ್ದರು.
 
ಒಂದು ವೇಳೆ ಅವರು 35 ರನ್ ದಾಟಿದರೆ ಸಚಿನ್, ಬ್ರಿಯಾನ್ ಲಾರಾ, ರಾಹುಲ್ ದ್ರಾವಿಡ್  ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20 ಸಾವಿರ ರನ್ ಪೂರೈಸಿದ ವಿಶ್ವದ 13 ನೇ ಆಟಗಾರ ಮತ್ತು ಭಾರತದ ಮೂರನೇ ಆಟಗಾರ ಎಂಬ ದಾಖಲೆ ಮಾಡಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :