ಜನತೆ ಕೊಟ್ಟ ತೀರ್ಪನ್ನು ಗೌರವಿಸುತ್ತೇನೆ: ಸಿದ್ದರಾಮಯ್ಯ

ಬೆಂಗಳೂರು, ಶುಕ್ರವಾರ, 16 ಮೇ 2014 (17:51 IST)

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜನರು ಕೊಟ್ಟಂತ ತೀರ್ಪನ್ನು ಗೌರವಿಸುತ್ತೇನೆ.  ಈ ಚುನಾವಣೆಯಲ್ಲಿ ಜನರು ಕೊಟ್ಟಿರುವ ತೀರ್ಪು ರಾಜ್ಯಕ್ಕೆ ಸಂಬಂಧಿಸಿಲ್ಲ. ಜನರು ನಮಗೆ ಐದುವರ್ಷಗಳವರೆಗೆ ಅಧಿಕಾರ ಮಾಡಲು ತೀರ್ಪುನೀಡಿದ್ದಾರೆ. ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ನಡೆದ ಚುನಾವಣೆ. ಆದ್ದರಿಂದ ರಾಜ್ಯದ ಸಾಧನೆಗೆ ಈ ತೀರ್ಪು ಸಂಬಂಧಿಸಿಲ್ಲ  ಮತ್ತು ನಮ್ಮ ಒಂದು ವರ್ಷದ ಸಾಧನೆಯ ಅಳತೆಗೋಲಲ್ಲ ಎಂದು ಮುಖ್ಯಮಂತ್ರಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು 6 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ನಾವು 9 ಗೆದ್ದಿದ್ದು, ಬಿಜೆಪಿ 17 ಗೆದ್ದಿದೆ. ಅದಕ್ಕೆ ನಾವು ಬೆನ್ನು ತಟ್ಟುಕೊಳ್ಳುತ್ತೀವಿ ಎಂದು ಅರ್ಥವಲ್ಲ. ಒಟ್ಟಾರೆಯಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ.

ಇವತ್ತು ಜನತೆ ದೇಶದಲ್ಲಿ ಬದಲಾವಣೆ ಬಯಸಿ ಮತ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.  ಜನತೆ ಕೊಟ್ಟ ತೀರ್ಪನ್ನು ತಾವು ಒಪ್ಪಿಕೊಳ್ಳುವುದಾಗಿ ಅವರು ಹೇಳಿದರು.

 ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಮೋದಿ ಅಲೆಯ ಮಧ್ಯೆಯೂ ಅರುಣ್ ಜೇಟ್ಲಿಗೆ ಸೋಲು

ಅಮ್ರತ್‌ಸಾರ್: 2014ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಅಮ್ರಿತ್‌ಸಾರ್‌ನಿಂದ ಸ್ಪರ್ಧಿಸಿದ್ದ ಬಿಜೆಪಿ ...

news

ಭಾವಿ ಪ್ರಧಾನಿಗೆ ಹಾಲಿ ಪ್ರಧಾನಿ ಮನಮೋಹನ್ ಅಭಿನಂದನೆ

ಅಪ್ರತಿಮ ಗೆಲುವು ದಾಖಲಿಸಿ ಭಾರತದ ಮುಂದಿನ ಪ್ರಧಾನಿ ಹುದ್ದೆಗೆ ದಾಪುಗಾಲಿಟ್ಟಿರುವ ಹಾಲಿ ಗುಜರಾತ್ ...

news

ವಿಜಯದ ಹರುಷದಲಿ ಅಮ್ಮನ ಪಾದಕ್ಕೆರಗಿದ ಮೋದಿ

ತಾನು ಭಾರತದ 15 ನೇ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಗಾಂಧೀನಗರದಲ್ಲಿನ ಮನೆಯಲ್ಲಿ ತಮ್ಮ ತಾಯಿ ...

news

ಕರ್ನಾಟಕ ಚುನಾವಣೆ: ಗೆದ್ದವರು ಯಾರು, ಬಿದ್ದವರು ಯಾರು ಕೆಳಗಿದೆ ಓದಿ

ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಕೊನೆಯ ...