ಮೈಸೂರಿನ ಹಳೇ ಹುಲಿಯನ್ನು ಸೋಲಿಸಿದ ಹೊಸ ಸಿಂಹ

ಬೆಂಗಳೂರು, ಶುಕ್ರವಾರ, 16 ಮೇ 2014 (15:46 IST)

ಮೈಸೂರು:  ಮೈಸೂರು -ಕೊಡಗು ಕ್ಷೇತ್ರದಲ್ಲಿ ಹಳೇ ಹುಲಿ ಮತ್ತು ಬಿಸಿರಕ್ತದ ಸಿಂಹದ ನಡುವೆ ಹೋರಾಟವೆಂದು ಬಣ್ಣಿಸಲಾಗಿದ್ದ ಚುನಾವಣೆಯಲ್ಲಿ ಕೊನೆಗೂ ಸಿಂಹ ಗೆದ್ದಿದೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅವರು ಕಾಂಗ್ರೆಸ್ ನ ಹಳೆ ಹುಲಿ ವಿಶ್ವನಾಥ್ ಅವರನ್ನು 9 ಸಾವಿರ ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದಾರೆ.

ಮೋದಿಯವರ ಪ್ರಚಂಡ ಅಲೆಗೆ ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳು ನೆಲಕಚ್ಚಿದ್ದು, ಅವರ ಪೈಕಿ ವಿಶ್ವನಾಥ್ ಕೂಡ ಒಬ್ಬರು.  ಮೈಸೂರಿನಲ್ಲಿ ಕೂಡ ನರೇಂದ್ರ ಮೋದಿ ಅಲೆ ಬೀಸಿರುವುದು ಈ ಫಲಿತಾಂಶದಿಂದ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪರಾಭವಗೊಂಡಿರುವುದರಿಂದ ಸಿಎಂ ತಲೆತಗ್ಗಿಸುವಂತಾಗಿದೆ.

ಸಿದ್ದರಾಮಯ್ಯ ಅವರು ವಿಶ್ವನಾಥ್ ಪರ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದರು.ಸ್ವತಃ ನರೇಂದ್ರ ಮೋದಿ ಅವರೇ ಮೈಸೂರಿಗೆ ಆಗಮಿಸಿ ಪ್ರತಾಪ್ ಸಿಂಹ ಅವರ ಪರವಾಗಿ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಬಹಿರಂಗಸಭೆಯಲ್ಲಿ ಮತದಾರರನ್ನು ಕೋರಿದ್ದರು. ಮೋದಿ ಅಲೆಯಲ್ಲಿ ಕಾಂಗ್ರೆಸ್ ಪಕ್ಷ  ಕೊಚ್ಚಿಹೋಗಿರುವುದಂತೂ ಖಂಡಿತ. 

 
 
 
 ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಬಾಲಿವುಡ್ ಹಾಟ್ ಐಟಂಗರ್ಲ್‌ ರಾಖಿ ಸಾವಂತ್‌ಗೆ ಕೇವಲ 15 ಮತಗಳು

ಮುಂಬೈ: ರಾಷ್ಟ್ರೀಯ ಆಮ್ ಆದ್ಮಿ ಪಕ್ಷದ ಮುಖ್ಯಸ್ಥೆ ಬಾಲಿವುಡ್ ಹಾಟ್ ಐಟಂಗರ್ಲ್ ರಾಖಿ ಸಾವಂತ್‌ಗೆ ಲೋಕಸಭೆ ...

news

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಗೆಲುವು

ರಾಯ್‌ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೆಲುವು ...

news

ವಿದಿಶಾ ಕ್ಷೇತ್ರದಿಂದ ಸುಷ್ಮಾ ಸ್ವರಾಜ್ ಗೆಲುವು

ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಗೆಲುವು ಸಾಧಿಸಿದ್ದಾರೆ.

news

ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್‌ಗೆ ಸೋಲು

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪೀಕರ್ ಮೀರಾ ಕುಮಾರ್ ಸೋತಿದ್ದಾರೆ. ಸಸಾರಾಂ ...