ಹೆಗಡೆ ಪಂಚಾಯಿತಿ ಮೆಂಬರ್ ಆಗೋದಕ್ಕೂ ನಾಲಾಯಕ್ ಅಂದ ಸಿದ್ದು

ಉಡುಪಿ, ಮಂಗಳವಾರ, 16 ಏಪ್ರಿಲ್ 2019 (16:03 IST)

ವೇದಿಕೆ ಮೇಲೆ ಭಾಷಣ ಮಾಡುವಾಗೆಲ್ಲಾ ಮಿಸ್ಟರ್ ಯಡಿಯೂರಪ್ಪ.... ಮಿಸ್ಟರ್ ಯಡಿಯೂರಪ್ಪ ಅಂತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಒಂದೆಡೆ ಕೋಮುವಾದವನ್ನ ಪ್ರಮೋಟ್ ಮಾಡ್ತಿದ್ದೀರಾ, ಮತ್ತೊಂದೆಡೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದೀರಾ, ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮಿಸ್ಟರ್ ನರೇಂದ್ರ ಮೋದಿಯವ್ರೆ ನೀವು ಚೌಕಿದಾರ ಹೇಗಾಗ್ತೀರಾ ಎಂದು ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಮತಯಾಚನೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನನ್ನ ಪ್ರಕಾರ ಆ ಅನಂತ್ ಕುಮಾರ್ ಹೆಗ್ಡೆ ಗ್ರಾಮ ಪಂಚಾಯಿತಿ ಮೆಂಬರ್ ಆಗೋದಕ್ಕೂ ನಾಲಾಯಕ್ ಎಂದರು. ಮೋದಿ ಹೇಳಿದ ಮೇಲೆ ಆ ಯಡಿಯೂರಪ್ಪ, ಶೋಭಾ ಎಲ್ಲರೂ ನಾನು ಚೌಕಿದಾರ್ ಅಂತಿದ್ದಾರೆ.

ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಎಲ್ಲರೂ ಜೈಲಿಗೆ ಹೋಗಿ ಬಂದೋರು. ಜೈಲಿಗೆ ಹೋಗಿ ಬಂದೋರೆಲ್ಲಾ ಚೌಕಿದಾರರಾದ್ರೆ ನಾವೆಲ್ಲಾ ಏನು ಎಂದು ಪ್ರಶ್ನಿಸಿದ್ದಾರೆ. ಈ ಗಿರಾಕಿ ಜೈಲಿಗೆ ಹೋಗಿ ಬಂದವ. ಮರ್ಡರ್ ಕೇಸಲ್ಲಿ ಸಿಕ್ಕಿಬಿದ್ದು ಮೂರು ವರ್ಷ ಜೈಲಿನಲ್ಲಿದ್ದ ಎಂದು ಅಮಿತ್ ಶಾ ವಿರುದ್ಧವೂ ವ್ಯಂಗ್ಯವಾಡಿದ್ರು. 


 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಸುಮಲತಾ ಪಿಹೆಚ್‌ಡಿ ಮಾಡಿರೋರು ಆಡದಂಥ ಮಾತು ಆಡ್ತಿದಾರಂತೆ!

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ವಿರುದ್ದ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.

news

ತೇಜಶ್ವಿನಿ ಅನಂತ್ ಕುಮಾರ್ ಯಾರ ವಿರುದ್ಧ ಕೇಸ್ ಮಾಡಿದ್ದು?

ಬೆಂಗಳೂರು ದಕ್ಷಿಣ ಮತಕ್ಷೇತ್ರದಲ್ಲಿ ಟಿಕೆಟ್ ಸಿಗದೇ ವಂಚಿತರಾದ ತೇಜಸ್ವಿನಿ ಅನಂತಕುಮಾರ್ ಈಗ ಸೈಬಲ್ ಕ್ರೈಂ ...

news

ಆಂಬುಲೆನ್ಸ್, ಪೊಲೀಸ್ ವಾಹನ ತಪಾಸಣೆಗೆ ಖಡಕ್ ಸೂಚನೆ

ಚುನಾವಣಾ ಪ್ರಕ್ರಿಯೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನೂ ...

news

ಬಿಜೆಪಿ ನಾಯಕರಿಗೆ ಸೋಲಿನ ಭೀತಿ?

ಬಿಜೆಪಿ ನಾಯಕರು ರಾಜ್ಯದ ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನೇ ನೀಡುತ್ತಿದ್ದಾರೆ. ಇದು ...