ಕೈ ನಾಯಕ ರಾಜಣ್ಣ ಪರೋಕ್ಷವಾಗಿ ನಮಗೆ ಬೆಂಬಲ ನೀಡುತ್ತಾರೆ - ಬಿಜೆಪಿ ನಾಯಕರಿಂದ ಅಚ್ಚರಿಯ ಹೇಳಿಕೆ

ತುಮಕೂರು, ಸೋಮವಾರ, 15 ಏಪ್ರಿಲ್ 2019 (08:48 IST)

ತುಮಕೂರು : ಕಾಂಗ್ರೆಸ್ ಮಾಜಿ ಶಾಸಕ ಅವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮಗೆ ನೀಡುತ್ತಾರೆ ಎಂದು ಬಿಜೆಪಿ ನಾಯಕ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ತುಮಕೂರು ಕ್ಷೇತ್ರದ ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಪರ ಪ್ರಚಾರ ನಡೆಸಿ ಮಾತನಾಡಿದ ವಿ.ಸೋಮಣ್ಣ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು, ರಾಜಣ್ಣ ಅವರ ಅಭಿವೃದ್ಧಿ ಕೆಲಸ ನಮಗೆ ಅನುಕೂಲವಾಗಲಿದೆ. ಮೈತ್ರಿ ಬಗ್ಗೆ ಬೇಸರ ಇರುವುದಾಗಿ ರಾಜಣ್ಣ ಅವರು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಹಾಗಾಗಿ ಆಂತರಿಕವಾಗಿ ನಮಗೆ ಬೆಂಬಲ ನೀಡುತ್ತಾರೆ. ಅವರ ನಾಮಪತ್ರವನ್ನು ಒತ್ತಾಯದಿಂದ ಹಿಂಪಡೆಯುವಂತೆ ಮಾಡಿದ್ದಾರೆ. ಅವರಿಗೆ ಮೈತ್ರಿಯಲ್ಲಿ ಅಸಮಾಧಾನ ಇದೆ. ಈ ಅಸಮಾಧಾನ ನಮಗೆ ಅನುಕೂಲ ಆಗಲಿದೆ  ಎಂದು ಕೆಎನ್ ರಾಜಣ್ಣ ಅವರನ್ನು ಹಾಡಿ ಹೊಗಳಿದ್ದಾರೆ.

 

ಚುನಾವಣೆಗೆ ಕೆಲ ದಿನಗಳು ಇರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಮಾಜಿ ಶಾಸಕ ರಾಜಣ್ಣ ಅವರನ್ನು ಹಾಡಿ ಹೊಗಳುವ ರೀತಿ ಅಚ್ಚರಿ ಮೂಡಿಸಿದ್ದಲ್ಲದೇ ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್. ಡಿ.ದೇವೆಗೌಡರಿಗೆ ಕೈ ಕೊಡುತ್ತಾರಾ ರಾಜಣ್ಣ ಎಂಬ ಅನುಮಾನ ಇದೀಗ ಶುರುವಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಸುಮಲತಾ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ ಎಂದ ಸಿದ್ಧರಾಮಯ್ಯ

ಮೈಸೂರು : ಮಂಡ್ಯ ಲೋಕಸಭೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ...

news

ಇಂದು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲಿರುವವರು ಯಾರು ಗೊತ್ತಾ?

ಮಂಡ್ಯ: ಮಂಡ್ಯ ಚುನಾವಣೆ ರಣ ಕಣ ಕೊನೇ ಕ್ಷಣದ ರಂಗೇರಿದ್ದು, ಇಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ...

news

ಯಶ್, ದರ್ಶನ್ ಗೆ ಟಾಂಗ್ ನೀಡಿದ MLC

ಮಂಡ್ಯದಲ್ಲಿ ನಮಗೆ ಹಿನ್ನಡೆ ಯಾಗುವ ಪ್ರಶ್ನೆಯೇ ಇಲ್ಲ. ನಾನು ಒಂದು ನ್ಯೂಸ್ ಚಾನೆಲ್ ಎಪಿಸೋಡ್ ಬಗ್ಗೆ ಕೇಳಿದ ...

news

ನಿಖಿಲ್ ಎಲ್ಲಿದ್ದೀಯಪ್ಪಾ ಟ್ರೋಲ್ ಗೆ ಸಿಎಂ ಕೊಟ್ಟ ಉತ್ತರ ಏನ್ಗೊತ್ತಾ?

ನಿಖಿಲ್ ಎಲ್ಲಿದ್ಯಪ್ಪ, ನಿಖಿಲ್ ಎಲ್ಲಿದ್ಯಪ್ಪ ಎಂದು ಬಹಳ ಚರ್ಚೆ ಯಾಗ್ತಿದೆ ಈ ಬಗ್ಗೆ ಸ್ವಲ್ಪ ಮಾತನಾಡಿ ...