ನಾನೂ ಅಳಬೇಕೆಂದಿದ್ದೇನೆ ಆದ್ರೆ ಕಣ್ಣೀರು ಬರ್ತಿಲ್ಲ ಎಂದ SMK

ಬೆಂಗಳೂರು, ಮಂಗಳವಾರ, 16 ಏಪ್ರಿಲ್ 2019 (19:14 IST)

ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ. ಹೀಗಂತ ಬಿಜೆಪಿ ಹಿರಿಯ ಮುಖಂಡ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಐಟಿ, ಇಡಿ ಸುಖಾಸುಮ್ಮನೆ ದಾಳಿ ನಡೆಸುವುದಿಲ್ಲ. ಅವರೂ ಸಹ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ದಾಳಿ ನಡೆಸುತ್ತಿದ್ದಾರೆ. ದಾಳಿಯ ವೇಳೆ ಕೊಟ್ಯಂತರ ರೂಪಾಯಿ ಸಿಗುತ್ತಿಲ್ಲವಾ? ಇಡಿ, ಐಟಿ ಗೆ ಅವರ ಕೆಲಸ ಮಾಡಲು ಬಿಡಿ. ಹಿಗಂತ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಹೇಳಿದ್ದಾರೆ.

ಇನ್ನು, ನಾನೂ ಕೂಡ ಕಣ್ಣೀರು ಹಾಕಬೇಕು ಎಂದು ಪ್ರಯತ್ನಿಸುತ್ತೇನೆ. ಆದರೆ ಕಣ್ಣೀರು ಬರುವುದೇ ಇಲ್ಲ. ಆದರೆ ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ ಅಂತ ಸಿಎಂಗೆ ಛಾಟಿ ಬೀಸಿದ್ರು.

ಬಹುಶಃ ಅವರ ಹೃದಯ ಮಿಡಿಯುತ್ತದೆ. ಒಬ್ಬ ತಂದೆಯ ಹೃದಯ ಮಕ್ಕಳಿಗಾಗಿ ಅಷ್ಟೂ ಮಿಡಿಯದೇ ಇದ್ದರೆ ಹೇಗೆ? ಹಾಗಾಗಿ ಅವರಿಗೆ ಕಣ್ಣೀರು ಸಲೀಸಾಗಿ ಬರುತ್ತದೆ ಅಂತ ಕೃಷ್ಣ ಹೇಳಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಕೆ.ಹೆಚ್.ಮುನಿಯಪ್ಪ ವಿರುದ್ಧ ಸಿಡಿ ಬಿಡುಗಡೆ; ಅದ್ರಲ್ಲೇನಿದೆ?

ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಿಡಿ ...

news

ಅಪ್ಪ-ಮಕ್ಕಳಿಗೆ ಸುಳ್ಳು ಹೇಳುವುದೇ ಕೆಲಸ ಎಂದ BSY

ಕುಮಾರಸ್ವಾಮಿ ನೆತೃತ್ವದ ಸರಕಾರ, ವರ್ಗಾವಣೆ ದಂಧೆ, ಲೂಟಿ ಹೊಡೆಯುವುದರಲ್ಲಿ ದಂಧೆ ಮಾಡುತ್ತಿದ್ದಾರೆ. ಹೀಗಂತ ...

news

ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕನಕಪುರ ಬಂಡೆ

ಕನಕಪುರ ಖ್ಯಾತಿಯ ಬಂಡೆ ಬಿಜೆಪಿ ವಿರುದ್ಧ ಬೆಂಕಿ ಉಂಡೆ ಉಗುಳಿದ್ದಾರೆ.

news

ಹೆಗಡೆ ಪಂಚಾಯಿತಿ ಮೆಂಬರ್ ಆಗೋದಕ್ಕೂ ನಾಲಾಯಕ್ ಅಂದ ಸಿದ್ದು

ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮಿಸ್ಟರ್ ನರೇಂದ್ರ ಮೋದಿಯವ್ರೆ ನೀವು ಚೌಕಿದಾರ ಹೇಗಾಗ್ತೀರಾ ಎಂದು ...