ಮೂಷಕ ವಾಹನ ಭೂಷಿತ ಗಣಪ

ವಿಘ್ನವಿನಾಶಕ ಭೂಷಿತ ರಾಗಿರುವುದಕ್ಕೆ ಪುರಾಣದಲ್ಲಿ ವಿವಿಧ ಕತೆಗಳಿವೆ.

WD
ಅಸುರ ಗುರು ಶುಕ್ರಚಾರ್ಯರ ಸಲಹೆಯಂತೆ ಶಿವನ ಕುರಿತು ಉಗ್ರ ತಪಗೈದ ರಾಕ್ಷಸ ಶಿವನನ್ನು ಒಲಿಸಿಕೊಂಡು ಅವರಿಂದ ಅದಮ್ಯ ಶಕ್ತಿಗಳನ್ನು ವರವಾಗಿ ಪಡೆದುಕೊಳ್ಳುತ್ತಾನೆ. ಆದರೆ ಆ ಶಕ್ತಿಯನ್ನು ದೇವತೆಗಳನ್ನು ಪೀಡಿಸಲು ದುರುಪಯೋಗಪಡಿಸಿಕೊಳ್ಳುತ್ತಾನೆ. ದೇವತೆಗಳು ಆದಿವಂದ್ಯರ ಬಳಿ ಸಹಾಯಕ್ಕಾಗಿ ಧಾವಿಸುತ್ತಾರೆ. ದೇವತೆಗಳ ಪ್ರಾರ್ಥನೆಯ ಮೇರೆಗೆ ದುಷ್ಟ ರಾಕ್ಷಸನೊಂದಿಗೆ ಗಜಕರ್ಣ ಯುದ್ಧಕ್ಕೆ ತೊಡಗಿದ. ಆದರೆ ವರಬಲ ಹೊಂದಿರುವ ದೈತ್ಯನನ್ನು ಸಾಮಾನ್ಯ ಯುದ್ಧದ ಮೂಲಕ ಸೋಲಿಸುವುದು ಸಾಧ್ಯವಿಲ್ಲ ಎಂದು ವಿದ್ಯಾಧಿದೇವನ ಅರಿವಿಗೆ ಬರುತ್ತದೆ. ಆಗ ತನ್ನ ದಂತವನ್ನು ಮುರಿದು ಅಸುರನ ಮೇಲೆ ಪ್ರಯೋಗಿಸಿ ರಕ್ಕಸನನ್ನು ಬಂಧಿಸಿ ಇಲಿಯಾಗಿ ಪರಿವರ್ತಿಸಿ ತನ್ನ ವಾಹನವಾಗಿಸಿಕೊಳ್ಳುತ್ತಾನೆ ಮತ್ತು ಈ ಮೂಲಕ ಮೂಷಕ ವಾಹನ ಭೂಷಿತರಾಗುತ್ತಾರೆ.

ಗೌರೀತನಯ ಮೂಷಕ ವಾಹನನಾದ ಬಗ್ಗೆ ಇರುವ ಇನ್ನೊಂದು ಕತೆಯಂತೆ, ಒಂದುದಿನ ಗಾಂಧರ್ವ ಕ್ರೌಂಚ ದೇವೆಂದ್ರರ ಸಭೆಯಲ್ಲಿ ವರುಣದೇವನನ್ನು ಅವಮಾನ ಪಡಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಕ್ರೌಂಚನನ್ನು ಇಲಿಯಾಗಿ ಪರಿವರ್ತಿಸಿ ವರುಣದೇವ ಸೇಡು ತೀರಿಸಿಕೊಳ್ಳುತ್ತಾರೆ. ಇಲಿಯಾಗಿ ಬದಲಾದ ಕ್ರೌಂಚ ಸಾಮಾನ್ಯ ಇಲಿಗಳಂತೆಯೇ ಪರಾಶರರ ಆಶ್ರಮಕ್ಕೆ ನುಗ್ಗಿ ದಾಂಧಲೆ ಎಬ್ಬಿಸಲು ಶುರುವಿಟ್ಟಿತು. ಋಷಿಗಳು ವಿಘ್ನನಾಶಕನನ್ನು ಪ್ರಾರ್ಥಿಸಿದರು, ಭಕ್ತನ ಮೊರೆ ಕೇಳಿ ಧಾವಿಸಿದ ಭಕ್ತವತ್ಸಲ ಇಲಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನ್ನ ವಾಹನವಾಗಿರಿಸಿಕೊಂಡ ಎಂಬುದು ಇನ್ನೊಂದು ಕತೆ.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

2008ರಲ್ಲಿ ನಟಮಹಾಶಯರ ಸ್ಕೋರ್ ಕಾರ್ಡ್

ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...

ಎದ್ದು ಬಿದ್ದ ಬಾಲಿವುಡ್ ನಾಯಕಿಯರಾರು?

2008ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ...

75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ

ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ...

ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು

ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ...

Widgets Magazine