ಗುಲಾಬಿ ಹೂವಿನ ಚಹಾದ ಲಾಭಗಳು

ಬೆಂಗಳೂರು, ಗುರುವಾರ, 12 ಜುಲೈ 2018 (17:09 IST)

ಒಂದು ಆರೋಗ್ಯಕರ ಗಿಡಮೂಲಿಕೆ ಚಹಾಗಳಲ್ಲಿ ಒಂದಾಗಿದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಇತರ ಪ್ರಯೋಜನಗಳನ್ನು ಒದಗಿಸುತ್ತದೆ. 
- ಇದು ಮುಟ್ಟಿನ ದಿನಗಳಲ್ಲಿ ಆಗುವ ಹೊಟ್ಟೆ ನೋವು ಕಡಿಮೆ ಮಾಡುತ್ತದೆ
- ದೀರ್ಘಕಾಲದ ಕಾಯಿಲೆ ತಡೆಗಟ್ಟತ್ತದೆ
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
- ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ
- ನೈಸರ್ಗಿಕವಾಗಿ ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ
- ಇದು ಗಂಟಲು ನೋವನ್ನು ಕಡಿಮೆ ಮಾಡುತ್ತದೆ
- ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ
- ಸಂಧಿವಾತದ ಉರಿಯೂತವನ್ನು ಕಡಿಮೆ ಮಾಡುತ್ತದೆ
 
ಮುಖ್ಯವಾಗಿ ದೇಹದ ತೂಕವನ್ನು ಕಡಿಮೆ ಮಾಡಲು ಇದರ ಸೇವನೆ ಮಾಡಲಾಗುತ್ತದೆ.
 
ಗುಲಾಬಿ ಹೂವಿನ ಚಹಾ ಮಾಡುವುದು ಹೇಗೆ?
 
ಬೇಕಾಗುವ ಸಾಮಗ್ರಿಗಳು -
1 ಕಪ್ ಚೆನ್ನಾಗಿ ತೊಳೆದ ತಾಜಾ ಗುಲಾಬಿ ಹೂವಿನ ಪಕಳೆ
3 ಕಪ್ ಬಿಸಿ ನೀರು
1/2 ಚಮಚ ಜೇನು ತುಪ್ಪ
 
ಮಾಡುವ ವಿಧಾನ -
- ಒಂದು ಚಿಕ್ಕ ಬಾಣಲೆಯಲ್ಲಿ ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ಹಾಕಿ 5 ನಿಮಿಷ ಪಕ್ಕಕ್ಕಿರಿಸಿ (ಕುದಿಸ ಬೇಡಿ).
- ನಂತರ ಇದರಿಂದ ಗುಲಾಬಿ ಹೂವಿನ ಪಕಳೆಗಳನ್ನು ಬೇರ್ಪಡಿಸಿ, ಒಂದು ಲೋಟದಲ್ಲಿ ನೀರನ್ನು ತೆಗೆದು, ಅದಕ್ಕೆ ಜೇನು ತುಪ್ಪವನ್ನು ಸೇರಿಸಿ ಸವಿಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಲೆನೋವಿಗೆ ಈ 4 ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

ತಲೆ ನೋವು ಬರಲು ಕಾರಣ ಒಂದಾ ಎರಡಾ? ಒತ್ತಡ, ಕಂಪ್ಯೂಟರ್ ‌ಮುಂದೆ ಕುಳಿತು ತಾಸುಗಟ್ಟಲೆ ಮಾಡುವ ಕೆಲಸ, ...

news

ಆರೋಗ್ಯಕರ ಮೊಸರನ್ನದ ಲಾಭಗಳು

ಆಹಾರ ಕ್ರಮದಲ್ಲಿ ಮೊಸರನ್ನಕ್ಕೆ ವಿಶೇಷ ಸ್ಥಾನವಿದೆ. ಕೆಲವರು ಇದನ್ನು ಇಷ್ಟುಟ್ಟಿ ತಿಂದರೆ ಇನ್ನೂ ಕೆಲವರು ...

news

ಆರೋಗ್ಯಕರ ಸೌತೆಕಾಯಿಯ ಉಪಯೋಗಗಳು

ಬೇಸಿಗೆಯಲ್ಲಿ ಹೆಚ್ಚಾಗಿ ಸೌತೆಕಾಯಿಯನ್ನು ಸೇವಿಸುವುದನ್ನು ನಾವು ಕಾಣಬಹುದು. ಇದರಲ್ಲಿ ನೀರಿನಾಂಶ ...

news

ರಾಗಿಯ ಉಪಯೋಗ ಕೇಳಿದ್ರೆ ನೀವು ಚಕಿತಗೊಳ್ಳೋದು ಗ್ಯಾರಂಟಿ...!

ಇತ್ತೀಚಿನ ದಿನಗಳಲ್ಲಿ ರಾಗಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದಕ್ಕೆ ಅದರ ಆರೋಗ್ಯಕ್ಕೆ ...