ಋತುಮತಿಯಾಗಿದ್ದಾಗ ಲೈಂಗಿಕ ಕ್ರಿಯೆ ಮಾಡಬಹುದೇ ಎಂಬ ಆತಂಕ ಹಲವು ಮಹಿಳೆಯರನ್ನು ಕಾಡುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಯೋನಿ ಭಾಗ ಸೂಕ್ಷ್ಮವಾಗಿರುತ್ತದೆ ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆ ಬೇಡ ಎನ್ನುವುದುಂಟು.ಆದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಕೆಲವು ಲಾಭಗಳೂ ಇವೆ. ಋತುಮತಿಯಾದ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಕಾಲಿನ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಲೈಂಗಿಕ ಕ್ರಿಯೆಯೇ ಮದ್ದು ಎನ್ನುತ್ತಾರೆ ಕೆಲವು ಲೈಂಗಿಕ ತಜ್ಞರು.ಲೈಂಗಿಕ ಕ್ರಿಯೆ ವೇಳೆ ಯೋನಿ ಸಡಿಲವಾಗುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.