ನಿಮ್ಮ ಮಗಳ ಕೂದಲನ್ನು ರಕ್ಷಿಸಲು ಈ ಎಣ್ಣೆ ಮನೆಯಲ್ಲೇ ತಯಾರಿಸಿ!

ಬೆಂಗಳೂರು| Krishnaveni K| Last Modified ಸೋಮವಾರ, 29 ಜೂನ್ 2020 (09:01 IST)
ಬೆಂಗಳೂರು: ಹೆಣ್ಣು ಮಕ್ಕಳೆಂದರೆ ಅವರ ಕೂದಲನ್ನು ಸಂರಕ್ಷಿಸುವುದೂ ತಾಯಂದಿರ ಹೊಣೆಯಾಗಿರುತ್ತದೆ. ಅಂಗಡಿಗಳಲ್ಲಿ ಸಿಗುವ ತರಹೇವಾರಿ ಶ್ಯಾಂಪೂ, ಕಂಡೀಷನರ್ ಬದಲು ಮನೆಯಲ್ಲೇ ಕೂದಲು ಸೊಂಪಾಗಿ, ತಂಪಾಗಿ ಬೆಳೆಯಲು ಕರಿಬೇವಿನ ಎಣ್ಣೆ ಮಾಡಿಕೊಂಡು ಹಚ್ಚಿಕೊಳ್ಳುತ್ತಿರಿ.

 
ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಸ್ವಲ್ಪ ಕೊಬ್ಬರಿ ಎಣ್ಣ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳು ಮತ್ತು ಕೊಂಚವೇ ಮೆಂತೆಯ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈ ಎಣ್ಣೆಯನ್ನು ಹದ ಬಿಸಿ ಇರುವಾಗಲೇ ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಇದರಿಂದ ಹದ ಬಿಸಿ ಎಣ್ಣೆ ಹಚ್ಚುವುದರಿಂದ ಶೀತದ ಸಮಸ್ಯೆಯೂ ಬರದು.
ಇದರಲ್ಲಿ ಇನ್ನಷ್ಟು ಓದಿ :