ಪ್ರತಿದಿನ 1 ಬಾದಾಮಿ ಸೇವಿಸಿದರೆ ಇಷ್ಟೆಲ್ಲ ಪ್ರಯೋಜನಗಳಿವೆಯೇ?

ಬೆಂಗಳೂರು, ಗುರುವಾರ, 21 ಫೆಬ್ರವರಿ 2019 (15:38 IST)

ಹಿಂದಿನ ಕಾಲದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು ದಿನಕ್ಕೆ 1 ಸೇಬನ್ನು ಸೇವಿಸಿ ವೈದ್ಯರಿಂದ ದೂರವಿರಿ ಎಂದು. ಆದರೆ ಈಗ ಅದಕ್ಕೆ ಸರಿಸಮಾನವಾಗಿ ಬಾದಾಮಿ ಎಂದು ಹೇಳಿದರೂ ತಪ್ಪಾಗಲಾರದು. ಈಗಿನ ವಿದ್ಯಮಾನದಲ್ಲಿ ಒಣಹಣ್ಣುಗಳು ನಾವು ಸೇವಿಸುವ ಆಹಾರ ಪದಾರ್ಥಗಳ ಒಂದು ಅವಿಭಾಜ್ಯ ಅಂಗವಾಗಿದೆ. ಅಂತಹ ಪದಾರ್ಥಗಳಲ್ಲಿ ಬಾದಾಮಿಯೂ ಒಂದು. ಆದರೆ ಬಾದಾಮಿಯನ್ನು ಹಾಗೆಯೇ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದು ಒಳಿತು. 
* ಬಾದಾಮಿಯಲ್ಲಿ ವಿಟಾಮಿನ್ ಇ, ನಾರಿನಂಶ ಮತ್ತು ಒಳ್ಳೆಯ ಕೊಬ್ಬು ಇರುವುದರಿಂದ ಅನೇಕ ರೋಗಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
* ಬಾದಾಮಿಯ ಸೇವನೆಯಿಂದ ಹೃದಯ ಸಂಬಂಧಿ ಖಾಯಿಲೆಯು ನಿವಾರಣೆಯಾಗುತ್ತದೆ.
* ಪ್ರತಿದಿನ ರಾತ್ರಿ ನೀರಿನಲ್ಲಿ ಬಾದಾಮಿಯನ್ನು ನೆನೆಸಿ ಬೆಳಿಗ್ಗೆ ಸೇವಿಸಿದರೆ ದೇಹದಲ್ಲಿರುವ ಕೆಟ್ಟ ಕೊಬ್ಬು ಹೊರಗೆ ಹೋಗುತ್ತದೆ.
* ತಜ್ಞರ ಪ್ರಕಾರ ಬಾದಾಮಿಯನ್ನು ಸೇವಿಸುವುದರಿಂದ ಮೆದುಳಿನ ಅರೋಗ್ಯವು ಸುಧಾರಿಸುತ್ತದೆ.
* ನೆನಸಿದ ಬಾದಾಮಿಯನ್ನು ಗರ್ಭಿಣಿಯರು ಸೇವಿಸುವುದರಿಂದ ಶಕ್ತಿ ಮತ್ತು ಪೌಷ್ಠಿಕಾಂಶವು ಸಿಗುತ್ತದೆ.
* ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿಯನ್ನು ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಮತ್ತು ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ,
*  ಬಾದಾಮಿ ಎಣ್ಣೆಯು ದೇಹದ ಸಮಗ್ರ ಆರೋಗ್ಯ ರಕ್ಷಣೆ ಮತ್ತು ಕಾರ್ಯನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ.
* ಬಾದಾಮಿಯಲ್ಲಿರುವ ಅನೇಕಾನೇಕ ಜೀವಸತ್ವಗಳು, ಖನಿಜಗಳು ಮತ್ತು ಫಾಸ್ಪರಸ್‌ಗಳು ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸಿ ದೀರ್ಘಬಾಳಿಕೆಗೆ ನೆರವಾಗುತ್ತವೆ.
* ನೆನೆಸದ ಬಾದಾಮಿಯ ಸೇವನೆಯಿಂದ ಚರ್ಮ ಮತ್ತು ಕಣ್ಣಿನ ಆರೋಗ್ಯವು ಹೆಚ್ಚುತ್ತದೆ.
* ಅಧ್ಯಯನಗಳ ಪ್ರಕಾರ ಬಾದಾಮಿಯು ಸಮೃದ್ಧ ಆಹಾರವಾಗಿದ್ದು ಕಡಿಮೆ ಕ್ಯಾಲೋರಿಯನ್ನು ದೇಹಕ್ಕೆ ಒದಗಿಸುತ್ತದೆ,
* ಬಾದಾಮಿಯ ಸೇವನೆಯಿಂದ ಲೈಂಗಿಕ ಸಾಮರ್ಥ್ಯದ ಕೊರತೆಯಿದ್ದರೆ ನಿವಾರಮೆಯಾಗುತ್ತದೆ.
* ಹಸಿರು ಬಾದಾಮಿಯ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುದರ ಜೊತೆಗೆ ವೇಗವಾಗಿ ತಗುಲುವ ಸೋಂಕಿನಿಂದ ದೂರವಿಡುತ್ತದೆ.
* ಬಾದಾಮಿಯಲ್ಲಿರುವ ಫೈಬರ್ ಸ್ಥಿರವಾದ ಕರುಳಿನ ಚಲನೆಗೆ ಮ್ತತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಮಧುಮೇಹಿಗಳಿಗೆ ಬಾದಾಮಿಯು ಉತ್ತಮ ಆಹಾರವಾಗಿದೆ.
* ಬಾದಾಮಿಯಲ್ಲಿ ವಿಟಾಮಿನ್ ಯಥೇಚ್ಛವಾಗಿರುವುದರಿಂದ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.
* ಬಾದಾಮಿ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
* ಶುದ್ಧ ಬಾದಾಮಿ ತೈಲವು ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಸಂಬಂಧಿತ ಕ್ಯಾನ್ಸರ್ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯಕಾರಿಯಾಗಿದೆ.
* ಬಾದಾಮಿ ಎಣ್ಣೆ, ಸ್ವಲ್ಪ ಸಕ್ಕರೆ ಹಾಗೂ ಬಿಸಿ ಮಾಡದ ತಾಜಾ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಮ ಮಾಡಿ ಮುಖ, ಕುತ್ತಿಗೆದಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆದರೆ ಶುಷ್ಕ ಚರ್ಮದ ಸಮಸ್ಯೆಗೆ ಸಹಕಾರಿಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಲಸಿನಕಾಯಿ ಬೋಂಡಾ

ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ...

news

ಮಾವಿನ ಹಣ್ಣಿನ ಪಲ್ಯ..

ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವಿನ ಹಣ್ಣುಗಳು ದೊರೆಯುತ್ತವೆ. ಮಾವಿನ ಹಣ್ಣುಗಳು ಹಾಗೆಯೇ ...

news

ಮಾವಿನ ಹಣ್ಣಿ ಹಪ್ಪಳ..

ಬೇಸಿಗೆಯ ದಿನಗಳು ಮಾವಿನ ಹಣ್ಣಿನ ಹಪ್ಪಳವನ್ನು ಮಾಡಲು ಸರಿಯಾದ ಸಮಯವಾಗಿದೆ. ಇದು ಮಾವಿನ ಸೀಸನ್ ಆಗಿದ್ದು ...

news

ರವೆ ಖಾರದ ಉಂಡೆ

ಸಾಮಾನ್ಯವಾಗಿ ಮಕ್ಕಳಿಗೆ ಉಪ್ಪಿಟ್ಟೆಂದರೇನೆ ಅಲರ್ಜಿ ಅಲ್ಲವೇ. ಬಹಳಷ್ಟು ಮಕ್ಕಳು ಇಷ್ಟಪಟ್ಟು ತಿನ್ನುವುದೇ ...