Widgets Magazine

ಸಪೋಟಾ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ...

ಬೆಂಗಳೂರು| nagashree| Last Modified ಬುಧವಾರ, 29 ಆಗಸ್ಟ್ 2018 (14:25 IST)
ಅನೇಕ ಜನರು ಚಿಕ್ಕು ಹಣ್ಣನ್ನು ಸಕ್ಕರೆಯಲ್ಲಿ ಕರಗಿದ ಪೇರಳೆ ಎಂದು ಬಣ್ಣಿಸುತ್ತಾರೆ. ಈ ಹೋಲಿಕೆಯೇ ನಿಮ್ಮ ಬಾಯಲ್ಲಿ ನೀರೂರಿಸುತ್ತದೆ. ಇದನ್ನು ಕರ್ನಾಟಕದಲ್ಲಿ ಚಿಕ್ಕು, ಸಪೋಟಾ ಎಂಬ ಹೆಸರುಗಳಲ್ಲಿ ಕರೆಯುತ್ತಾರೆ. ತಜ್ಞರು ಇದನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಇದಕ್ಕೆ ಅವರು ಹಲವಾರು ಪ್ರಯೋಜನಗಳ ಉದಾಹರಣೆಯನ್ನೂ ನೀಡುತ್ತಾರೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ನೀಡಲಾಗಿದೆ.
*ನಿಯಮಿತ ಕರುಳಿನ ಚಲನೆಗೆ ಉತ್ತೇಜನವನ್ನು ನೀಡಲು ಇದು ಸಹಾಯ ಮಾಡುತ್ತದೆ - ಚಿಕ್ಕು ಹಣ್ಣುಗಳಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು ಇದು ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಿ ಆ ಕಿರಿಕಿರಿಯಿಂದ ನಿಮ್ಮನ್ನು ಪಾರುಮಾಡುತ್ತದೆ. ಈ ಹಣ್ಣುಗಳಲ್ಲಿ ಹೆಚ್ಚಿನ ನೀರಿನ ಅಂಶವಿದ್ದು ಅದೂ ಸಹ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.
 
*ಕೊಲೊನ್ ಕ್ಯಾನ್ಸರ್‌ನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ - ಕಾರ್ಬೊಹೈಡ್ರೇಟ್‌ಗಳ ಅಜೈವಿಕ ವಿಧವಾದ ಫೈಬರ್ ಕೊಲೊನ್ ಕ್ಯಾನ್ಸರ್‌ನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ಚಿಕ್ಕು ಹಣ್ಣುಗಳನ್ನು ಸೇವಿಸುವಿಕೆಯು ನಿಮ್ಮನ್ನು ಕೊಲೊನ್ ಕ್ಯಾನ್ಸರ್‌ನಿಂದ ದೂರವಿಡುತ್ತದೆ.
 
*ಚಿಕ್ಕು ನಿಮ್ಮ ಹೃದಯದ ರಕ್ತನಾಳದ ವ್ಯವಸ್ಥೆಗೆ ಒಳ್ಳೆಯದು - ಹೃದಯರಕ್ತನಾಳದ ವ್ಯವಸ್ಥೆಯನ್ನು ಸೂಕ್ತ ಸ್ಥಿತಿಯಲ್ಲಿ ಇರಿಸಲು ಖನಿಜ ಪೊಟ್ಯಾಸಿಯಂ ಅವಶ್ಯಕ ಎಂಬುದು ಸಾಮಾನ್ಯ ಜ್ಞಾನ. ಬಾಳೆ ಹಣ್ಣುಗಳನ್ನು ತಿಂದು ನಿಮಗೆ ಬೇಸರ ಬಂದಿದ್ದರೆ ಚಿಕ್ಕು ಹಣ್ಣುಗಳಲ್ಲಿಯೂ ಸಹ ಪೊಟ್ಯಾಸಿಯಂ ನಿಂದ ತುಂಬಿರುವುದರಿಂದ ನೀವು ಅದನ್ನು ತಿನ್ನಬಹುದಾಗಿದೆ. ಖನಿಜವು ಸ್ನಾಯುಗಳ ಕಾರ್ಯಕ್ಷಮತೆಗೆ, ಬಲವಾದ ಮೂಳೆಗಳಿಗೆ ಮತ್ತು ವೇಗವಾದ ಚಯಾಪಚಯಕ್ಕೂ ಸಹ ಅಗತ್ಯವಾಗಿರುತ್ತದೆ.
 
*ಇದು ನಿಮಗೆ ಸ್ಲಿಮ್ ಆಗಲು ಸಹಾಯ ಮಾಡುತ್ತದೆ - ನಿಮ್ಮ ಆಹಾರದಲ್ಲಿನ ಪರಿಷ್ಕರಿಸಿದ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಹೆಚ್ಚಾಗಿರುವ ಆಹಾರಗಳನ್ನು ನೀವು ಹೊರಗಿರಿಸಬೇಕಾಗುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ನಿಮ್ಮ ಆಹಾರದಲ್ಲಿ ತರಕಾರಿಗಳು ಮತ್ತು ಸಾಕಷ್ಟು ಹಣ್ಣುಗಳನ್ನು ಸೇರಿಸಿಕೊಳ್ಳಬೇಕು. ಚಿಕ್ಕುವಿನಲ್ಲಿ ಕ್ಯಾಲೋರಿ ಹಾಗೂ ಕೊಬ್ಬಿನ ಅಂಶ ತುಂಬಾ ಕಡಿಮೆಯಿದ್ದು ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯವನ್ನೂ ಮಾಡುತ್ತದೆ ಮತ್ತು ರುಚಿಯಾಗಿಯೂ ಇರುತ್ತದೆ.
 
*ಆಕ್ರಮಣಕಾರಿ ಸೂಕ್ಷ್ಮಾಣುಜೀವಿಗಳ ವಿರುದ್ಧ ನಿಮ್ಮ ದೇಹವನ್ನು ರಕ್ಷಿಸುತ್ತದೆ - ಚಿಕ್ಕು ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಅಧಿಕವಿರುವುದರಿಂದ, ಅವುಗಳನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾ, ವೈರಾಣುಗಳು ಮತ್ತು ನಿಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುವ ವಸ್ತುಗಳ ವಿರುದ್ಧ ಪ್ರಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮನ್ನು ಇನ್ನಷ್ಟು ರಕ್ಷಿಸುತ್ತದೆ. ಶೀತ, ಜ್ವರ ಮತ್ತು ಇನ್ನೂ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಚಿಕ್ಕು ಹಣ್ಣುಗಳನ್ನು ಸೇವಿಸಿ.
 
*ಚರ್ಮದ ವಯಸ್ಸಾಗುವಿಕೆಯ ಚಿನ್ಹೆಗಳನ್ನು ದೂರ ಮಾಡುತ್ತದೆ - ನೀವು ಆರೋಗ್ಯಕರ ಮತ್ತು ಯುವಕರಾಗಿ ಕಾಣುವ ಚರ್ಮಕ್ಕಾಗಿ ಅಗತ್ಯವಿರುವ ಒಂದು ಪ್ರಮುಖ ಪೌಷ್ಟಿಕಾಂಶ ವಿಟಮಿನ್ ಸಿ. ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಈ ಪೋಷಕಾಂಶವು ನಿಮ್ಮ ಚರ್ಮದ ಮೇಲೆ ಸೂರ್ಯನ ಯುವಿ ಕಿರಣಗಳು ಮತ್ತು ಸ್ವತಂತ್ರ ರಾಡಿಕಲ್‌ಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲಿನ ಸುಕ್ಕುಗಳನ್ನು ಹಾಗೂ ರೇಖೆಗಳನ್ನು ಕಡಿಮೆ ಮಾಡಲೂ ಸಹ ಸಹಾಯಕವಾಗಿದೆ.
 
*ಅನೇಮಿಯಾ ಅಥವಾ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ - ಕಬ್ಬಿಣಾಂಶವು ರಕ್ತದಲ್ಲಿ ಅಗತ್ಯವಿರುವ ಖನಿಜಾಂಶವಾಗಿದ್ದು ಅದು ನಿಮ್ಮ ಜೀವಕೋಶಗಳಿಗೆ ಆಮ್ಲಜನಕದ ಅಣುಗಳನ್ನು ಪೂರೈಸುತ್ತದೆ. ದೇಹವು ಕಬ್ಬಿಣವನ್ನು ತನ್ನ ಜೀವಕೋಶದಲ್ಲಿ ಉತ್ಪಾದಿಸುವು ಸಾಧ್ಯವಿಲ್ಲವಾದ್ದರಿಂದ ರಕ್ತಹೀನತೆಯನ್ನು ನಿವಾರಿಸಲು ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಚಿಕ್ಕು ನಿಮ್ಮ ದೇಹಕ್ಕೆ ಕಬ್ಬಿಣದ ಅಂಶವನ್ನು ಹೇರಳವಾಗಿ ಒದಗಿಸುತ್ತದೆ.
 
*ಚಿಕ್ಕು ನಿಮಗೆ ಸಂತೋಷವನ್ನು ಉಂಟುಮಾಡುತ್ತದೆ - ಇದು ತುಂಬಾ ರುಚಿಕರವಾದ ಹಣ್ಣಾಗಿದ್ದು ಅದರ ರುಚಿಯೇ ನಿಮ್ಮ ಮುಖದ ಮೇಲೆ ನಗುವೊಂದನ್ನು ತರುತ್ತದೆ. ಅದರ ಆಹ್ಲಾದಕರವಾದ ಪರಿಮಳವನ್ನು ಹೊರತುಪಡಿಸಿ, ಚಿಕ್ಕು ಕೆಲವೊಂದು ಇತರ ಅಂಶಗಳನ್ನು ಒಳಗೊಂಡಿದ್ದು ಅವು ನಿಮ್ಮ ಮನಸ್ಸನ್ನು ಮುದಗೊಳಿಸಲು ಸಹಾಯ ಮಾಡುತ್ತವೆ. ಒತ್ತಡ, ಆಯಾಸ, ನಿದ್ರಾಹೀನತೆ ಮತ್ತು ಪ್ಯಾನಿಕ್ ಸಮಸ್ಯೆಗಳಿಗೆ ಸಫೋಟಾ ಉತ್ತಮವಾದ ಪರಿಹಾರ ಎಂದು ಹೇಳುತ್ತಾರೆ.
 
ಉತ್ತಮ ನೀರಿನ ಅಂಶವನ್ನು ಹೊಂದಿದ್ದು, ಸಿಹಿಯಾಗಿ ರುಚಿಕರವಾಗಿರುವ ಈ ಹಣ್ಣನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಅತ್ಯುತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :