ಆರೋಗ್ಯ : ಋತುಚಕ್ರ ಸರಿಯಾಗಿ ನಡೆದು ಋತುಬಂಧ ನೈಸರ್ಗಿಕವಾಗಿ ಒಂದು ವಯಸ್ಸಿಗೆ ಆದರೆ ಮಾತ್ರ ಮಹಿಳೆ ಆರೋಗ್ಯವಾಗಿರಲು ಸಾಧ್ಯ. ಅವಧಿಗೆ ಮುನ್ನ ಉಂಟಾದರೆ ಹಲವಾರು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.ಮಹಿಳೆಯರಿಗೆ ಋತುಚಕ್ರ ಎನ್ನುವುದು ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆ ಆಗಿರುತ್ತದೆ. ಆಕೆಯ ದೇಹದಲ್ಲಿ ಅಂಡಾಶಯಗಳು ಉತ್ಪತ್ತಿಯಾಗುವ ಕಾಲದಲ್ಲಿ ಋತುಚಕ್ರದ ಪ್ರಕ್ರಿಯೆ ನಡೆಯುತ್ತದೆ. ಒಂದು ಕಾಲಮಾನದವರೆಗೆ ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆನಂತರದಲ್ಲಿ ನಿಂತುಹೋಗುತ್ತದೆ.