ಬೆಂಗಳೂರು : ಮಹಿಳೆಯರು ಮನೆಯೊಳಗೆ ಹಾಗೂ ಹೊರಗಡೆ ಎರಡೂ ಕಡೆಗಳಲ್ಲಿ ಕೆಲಸ ಮಾಡುವುದಿಂದ ಸುಸ್ತು, ಆಯಾಸ ಸಾಮಾನ್ಯವಾಗಿ ಕಾಡುತ್ತದೆ. ಹಾಗಾಗಿ ಮಹಿಳೆಯರಿಗೆ ವಿಟಮಿನ್ ಸಿ ಅಗತ್ಯವಾಗಿ ಬೇಕು. ಇದರಿಂದ ಅವರ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು. *ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.*ಗರ್ಭಾವಸ್ಥೆಯಲ್ಲಿ ವಿಟಮಿನ್ ಸಿ ಸೇವಿಸಿದರೆ ಇದು ಭ್ರೂಣದ ಬೆಳೆವಣಿಗೆಗೆ ಸಹಕಾರಿಯಾಗಿದೆ. ಹಾಲುಣಿಸುವ ತಾಯಂದಿರಿಗೆ ಹೆಚ್ಚು ವಿಟಮಿನ್ ಸಿ ಅಗತ್ಯವಿದೆ.