ಲೈಂಗಿಕ ಕ್ರಿಯೆ ನಡೆಸಿದರೆ ಪ್ರಿಯಕರನಿಗೆ ಇರೋ ರೋಗ ಹೆಣ್ಣಿಗೂ ಬರುತ್ತಾ?

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (15:38 IST)

ಪ್ರಶ್ನೆ: ನನ್ನ ಪ್ರಿಯತಮ ನಾನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಹಲವು ಬಾರಿ ಯಾರಿಗೂ ಗೊತ್ತಾಗದಂತೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ.


ಆದರೆ ನನ್ನ ಸಮಸ್ಯೆ ಏನೆಂದರೆ, ಆತನಿಗೆ ಈಗ ವಿಚಿತ್ರ ರೋಗಗಳ ಲಕ್ಷಣಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಆತನೊಂದಿಗೆ ಸಂಭೋಗ ಮಾಡಬಹುದೇ? ದಯವಿಟ್ಟು ತಿಳಿಸಿ.

ಉತ್ತರ: ಕಾಮಾ ತುರಾನಂ ನ ಭಯಂ ನ ಲಜ್ಜಾ ಎನ್ನುವ ಮಾತಿದೆ. ಪುರುಷ ಹಾಗೂ ಸ್ತ್ರೀಯರು ಲೈಂಗಿಕ ಆಕರ್ಷಣೆಗೆ ಒಳಗಾದಾಗ ಯಾವುದನ್ನೂ ಲೆಕ್ಕಿಸುವುದಿಲ್ಲ. ಇನ್ನು ಪ್ರೀತಿ, ಪ್ರೇಮದಲ್ಲಿ ಬಿದ್ದಾಗ ಅವರ ಪ್ರಿಯತಮ, ಪ್ರೇಯಸಿಯೇ ಅವರಿಗೆ ಸರ್ವಸ್ವ ಆಗಿರುತ್ತಾರೆ. ಆದರೆ ಸರ್ವಸ್ವ ಎನ್ನುತ್ತಿದ್ದವರೇ ನರಕಕ್ಕೆ ದಾರಿ ತೋರಬಲ್ಲರು.

ನೀವು ನಿಮ್ಮ ಪ್ರೀತಿ ವಿಷಯವನ್ನು ಮಾತ್ರ ಹೇಳಿದ್ದೀರಿ. ಆದರೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇರಲಿ, ನೀವು ಆತನೊಂದಿಗೆ ಮದುವೆಗೂ ಮುಂಚೆ ಸಂಬಂಧ ಬೆಳೆಸಿದ್ದು ಸರಿಯಲ್ಲ. ಆದರೂ ಈಗ ಆತನಿಗೆ ವಿಚಿತ್ರ ರೋಗಗಳಿವೆ ಎಂದಿದ್ದೀರಿ. ನಿಮ್ಮ ಪ್ರಿಯಕರನಿಗೆ ರೋಗಗಳು ಇದ್ದರೆ ಆತನಿಂದ ನೀವು ಲೈಂಗಿಕವಾಗಿ ದೂರ ಉಳಿಯುವುದೇ ಕ್ಷೇಮ. ಏಕೆಂದರೆ ರಕ್ತಪಿತ್ತ ರೋಗಿಯಾದ ಪುರುಷರೊಡನೆ ಸ್ತ್ರೀಯರು ಸೇರಬಾರದು ಎಂದು ಹಿರಿಯರೇ ಹೇಳಿದ್ದಾರೆ.

ರೋಗಿಯ ಜತೆಗೆ ಸಂಭೋಗ ನಡೆಸುವುದು ಹಾನಿಕಾರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲು ನಿಮ್ಮ ಪ್ರಿಯಕರನಿಗೆ ವೈದ್ಯರಲ್ಲಿ ತೋರಿಸಿ ಉತ್ತಮ ಚಿಕಿತ್ಸೆ ಕೊಡಿಸಿ. ಅವನು ಗುಣವಾದ ಮೇಲೆ ನಿಮ್ಮಿಷ್ಟದಂತೆ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗಂಡ ಬೋರ್ ಆಗಿದ್ದಾನೆ ; ಲವರ್ ವಿದೇಶಕ್ಕೆ ಹೋಗಿದ್ದಾನೆ – ಕಾಮ ಹೇಗೆ ತಣಿಸಿಕೊಳ್ಳಲಿ

ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ...

news

ಗರ್ಭಾಶಯ ತೆಗೆದುಹಾಕುವುದರಿಂದ ಮಹಿಳೆಯ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ಪ್ರಶ್ನೆ : ನನಗೆ 65 ವರ್ಷ. ನನ್ನ ಹೆಂಡತಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಅವಳ ಗರ್ಭಾಶಯವನ್ನು ...

news

ಇಬ್ಬರು ಮಕ್ಕಳ ತಾಯಿ ನನ್ನ ಮೇಲೆ ಮೋಹ ಹೊಂದಿದ್ದಾಳೆ!

ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು, 22 ಮತ್ತು ನಾನು ಇಬ್ಬರು ಮಕ್ಕಳನ್ನು ಹೊಂದಿರುವ 24 ವರ್ಷದ ...

news

ಈ ಸಮಸ್ಯೆಯಿಂದ ಗಂಡನ ಅಗತ್ಯಗಳನ್ನು ಪೂರೈಸಲು ಆಗುತ್ತಿಲ್ಲ!

ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ನನ್ನ ಪತಿ 10ವರ್ಷ ಹಿರಿಯ. ನಾನು ಪಿಸಿಓಎಸ್ ಸಮಸ್ಯೆಯಿಂದ ...