ಹೋಳಿ ಪಾರ್ಟಿ ಮಾಡಿ ಟೀಕೆಗೊಳಗಾದ ಅಂಬಾನಿ ಪುತ್ರಿ ಇಶಾ

ಮುಂಬೈ| Krishnaveni K| Last Updated: ಸೋಮವಾರ, 9 ಮಾರ್ಚ್ 2020 (18:13 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಆಗಾಗ ಸೆಲೆಬ್ರಿಟಿಗಳಿಗೆ ಪಾರ್ಟಿ ಆಯೋಜಿಸಿ ಸುದ್ದಿಯಾಗುತ್ತಾರೆ. ಈ ಬಾರಿ ಅವರ ಪುತ್ರಿ ಇಶಾ ಅಂಬಾನಿ ಬಾಲಿವುಡ್ ನಟ-ನಟಿಯರನ್ನು ಕರೆಸಿಕೊಂಡು ಆಚರಿಸಿದ್ದಾರೆ.
 

ಆದರೆ ಅಂಬಾನಿ ಪುತ್ರಿಯ ಈ ಅದ್ಧೂರಿ ಪಾರ್ಟಿಗೆ ಟ್ವಿಟರಿಗರು ಟೀಕಿಸಿದ್ದಾರೆ. ದೇಶದೆಲ್ಲೆಡೆ ಕೊರೋನಾ ವ್ಯಾಪಿಸಿರುವಾಗ ಹೋಳಿ ಆಚರಣೆ ಮಾಡಿದ್ದಕ್ಕೆ ಹಲವರು ಟೀಕೆ ಮಾಡಿದ್ದಾರೆ. ಈ ಬಾಲಿವುಡ್ ಮಂದಿಗೆ ಕೊರೋನಾ ಬರಲ್ವಾ ಎಂದು ಕೆಲವರು ಟೀಕಿಸಿದರೆ ಮತ್ತೆ ಕೆಲವರು ಅಂಬಾನಿ ಮನೆಯವರಿಗೆ ಬೋರ್ ಆದಾಗಲೆಲ್ಲಾ ಅವರನ್ನು ಚಿಯರ್ ಅಪ್ ಮಾಡಲು ಬಾಲಿವುಡ್ ಮಂದಿಯೇ ಆಗಮಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
 
ಈ ರೀತಿ ಅದ್ಧೂರಿ ಪಾರ್ಟಿ ಮಾಡುವ ಬದಲು ಅದನ್ನು ಬಡವರಿಗೆ ದಾನ ಮಾಡಬಹುದಿತ್ತು ಎಂದೂ ಕೆಲವರು ಸಲಹೆ ನೀಡಿದ್ದಾರೆ. ಇಶಾ ಆಯೋಜಿಸಿದ್ದ ಪಾರ್ಟಿಗೆ ಪ್ರಿಯಾಂಕ ಚೋಪ್ರಾ ದಂಪತಿ, ಕತ್ರಿನಾ ಕೈಫ್ ಸೇರಿದಂತೆ ಬಾಲಿವುಡ್ ನ ಘಟಾನುಘಟಿಗಳೇ ಆಗಮಿಸಿ ಬಣ್ಣದ ಓಕುಳಿಯಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :