Widgets Magazine

ಶಬ್ಧ ಮಾಡುತ್ತಾ ರೊಮ್ಯಾನ್ಸ್ ಮಾಡಿದ್ದಕ್ಕೆ ದಂಪತಿಯನ್ನು ಕಿಕ್ ಔಟ್ ಮಾಡಿದ ಹಡಗಿನ ಸಿಬ್ಬಂದಿ!

ನವದೆಹಲಿ| Krishnaveni K| Last Modified ಸೋಮವಾರ, 4 ನವೆಂಬರ್ 2019 (11:52 IST)
ನವದೆಹಲಿ: ನವ ಜೋಡಿಯೊಂದು ಸಶಬ್ಧವಾಗಿ ರೊಮ್ಯಾನ್ಸ್ ಮಾಡಿದ ತಪ್ಪಿಗೆ ಹಡಗಿನಿಂದಲೇ ಕಿಕ್ ಔಟ್ ಆದ ಘಟನೆ ನಡೆದಿದೆ. ಇದು ನಡೆದಿರುವುದು ಕೆರೆಬಿಯನ್ ದ್ವೀಪದಲ್ಲಿ.

 
ಜರ್ಮನಿಯ ರೆನಾಟೆ ಮತ್ತು ವೋಲ್ಕರ್ ಎಂಬವರು ಈ ರೀತಿ ಕಿಕ್ ಔಟ್ ಆದ ದಂಪತಿ. ಕೆರೆಬಿಯನ್ ದ್ವೀಪ ರಾಷ್ಟ್ರಕ್ಕೆ ರಜಾ ಮಜಾ ಮಾಡಲು ಬಂದಿದ್ದ ದಂಪತಿ ಶಿಪ್ ನ ತಮ್ಮ ಕೊಠಡಿಯಲ್ಲಿ ಕಾಮಕೇಳಿಯಲ್ಲಿ ತೊಡಗಿದ್ದರು. ಆದರೆ ಅದರ ಸದ್ದಿನಿಂದ ಕಿರಿ ಕಿರಿ ಅನುಭವಿಸಿದ್ದ ಹಡಗಿನ ಸಿಬ್ಬಂದಿ ಬಾಗಿಲು ತಟ್ಟಿ ಕೂಡಲೇ ಹೊರ ನಡೆಯುವಂತೆ ಆದೇಶಿಸಿದ್ದಾರೆ.
 
ಈ ಕಾರಣಕ್ಕೆ ಇದೀಗ ಆ ದಂಪತಿ ಹಡಗಿನ ಸಿಬ್ಬಂದಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹಡಗಿನಿಂದ ತಮ್ಮನ್ನು ಹೊರ ಹಾಕಿದ್ದಕ್ಕೆ ಆ ದ್ವೀಪದಲ್ಲಿ ನಾವು ಏಕಾಂಗಿಯಾಗಿ ನಿಲ್ಲಬೇಕಾಯಿತು. ನಮ್ಮ ಬಳಿ ಲಗೇಜ್ ಕೂಡಾ ಇರಲಿಲ್ಲ. ಹೀಗಾಗಿ ಅಸಹಾಯಕರಾಗಿ ನಿಲ್ಲಬೇಕಾಯಿತು ಎಂದು ದಂಪತಿ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :