ಜೋಹಾನ್ಸ್ ಬರ್ಗ್ : ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ರ ಸಂಭಾವ್ಯ ಹೊಸ ರೂಪಾಂತರ ಪತ್ತೆಯಾಗಿದೆ, ಅದನ್ನು ಪಂಗೋ ವಂಶಾವಳಿ ಸಿ.1.2 ಗೆ ನಿಯೋಜಿಸಲಾಗಿದೆ. ಸಿ.1.2 ಅನ್ನು ಮೊದಲ ಬಾರಿಗೆ ಮೇ 2021 ರ ಸಮಯದಲ್ಲಿ ಗುರುತಿಸಲಾಯಿತು ಎಂದು ದೇಶದ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ ಮತ್ತು ಕ್ವಾಜುಲು-ನೇಟಾಲ್ ಸಂಶೋಧನಾ ನಾವಿನ್ಯತೆ ಮತ್ತು ಅನುಕ್ರಮ ವೇದಿಕೆ ಸಂಶೋಧಕರು ತಿಳಿಸಿದ್ದಾರೆ.