Widgets Magazine

ಮಹಿಳೆಯರು ಪತಿಯ ಬದಲು ಯಾರ ಜೊತೆ ಮಲಗಿದರೆ ನೆಮ್ಮದಿಯಿಂದ ನಿದ್ರಿಸುತ್ತಾರಂತೆ ಗೊತ್ತಾ?

ನ್ಯೂಯಾರ್ಕ್| pavithra| Last Modified ಸೋಮವಾರ, 14 ಜನವರಿ 2019 (07:25 IST)
ನ್ಯೂಯಾರ್ಕ್ : ಹೆಚ್ಚಾಗಿ ಮಹಿಳೆಯರು ತಮ್ಮ ಪತಿಯ ಜೊತೆ ಅಥವಾ ಮಕ್ಕಳ ಜೊತೆ ಮಲಗಲು ಇಷ್ಟಪಡುತ್ತಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ನ್ಯೂಯಾರ್ಕ್ ಕಾಲೇಜಿನ ಸಂಶೋಧಕರ ಪ್ರಕಾರ ಮಹಿಳೆಯರು ಯಾರ ಜೊತೆ ಹೆಚ್ಚು ನೆಮ್ಮದಿಯಿಂದ ಮಲಗ್ತಾರೆ ಎಂದು ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ನ್ಯೂಯಾರ್ಕ್ ಕಾಲೇಜಿನ ಸಂಶೋಧಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಕೆಲ ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿದ ನಂತರ ಹೇಳಿದ ವಿಚಾರವನ್ನು ಕೇಳಿದ್ರೆ ಆಶ್ಚರ್ಯವಾಗುತ್ತದೆ. ಯಾಕೆಂದರೆ ಪತಿಗಿಂತ ಸಾಕು ಪ್ರಾಣಿ ಜೊತೆ ಹೆಚ್ಚು ನೆಮ್ಮದಿಯಿಂದ ನಿದ್ರೆ ಮಾಡ್ತೇವೆ ಎಂದು ಮಹಿಳೆಯರು ಸಂಶೋಧನೆ ವೇಳೆ ಹೇಳಿದ್ದಾರಂತೆ. ಶೇಕಡಾ 55 ರಷ್ಟು ಮಹಿಳೆಯರು ನಾಯಿ ಜೊತೆ ಹಾಗೂ ಶೇಕಡಾ 33 ರಷ್ಟು ಮಹಿಳೆಯರು ಬೆಕ್ಕಿನ ಜೊತೆ ಮಲಗ್ತಾರಂತೆ.


ಸಂಗಾತಿ ಜೊತೆ ಮಲಗಿದಾಗ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲವೆಂದು ಮಹಿಳೆಯರು ತಿಳಿಸಿದ್ದರು. ಆದರೆ ಸಾಕು ಪ್ರಾಣಿಗಳ ಜೊತೆ ಮಲಗಿದರೆ ಅವು ಮಾಲೀಕನ ಆಸೆಯನ್ನು ಬಹು ಬೇಗ ಅರ್ಥ ಮಾಡಿಕೊಳ್ಳುತ್ತದೆ. ಹಾಗೇ ಮಾಲೀಕನ ರಕ್ಷಣೆ ಕೂಡ ಮಾಡುತ್ತದೆ. ಇದರಿಂದ ಮಾಲೀಕರು ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆಂದು ಸಂಶೋಧಕರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :