ನೇಪಾಳದಲ್ಲಿ ದಲಾಯಿ ಲಾಮಾರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲು ನಿರಾಕರಿಸಿದ ಸರ್ಕಾರ!

ಕಠ್ಮಂಡು, ಸೋಮವಾರ, 8 ಜುಲೈ 2019 (09:31 IST)

ಕಠ್ಮಂಡು : ನೇಪಾಳದಲ್ಲಿ ಧಾರ್ಮಿಕ ಮುಖಂಡ ದಲಾಯಿ ಲಾಮಾ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡುವುದನ್ನು ಅಲ್ಲಿನ ಸರ್ಕಾರ ನಿರಾಕರಿಸಿದೆ.
ಶನಿವಾರ 84ನೇ ವರ್ಷಕ್ಕೆ ಕಾಲಿರಿಸಿದ ದಲಾಯಿ ಲಾಮಾರ ಜನ್ಮದಿನವನ್ನು ಕಠ್ಮಂಡುವಿನಲ್ಲಿ ಸಂಭ್ರಮದಿಂದ ಆಚರಿಸಲು ನೇಪಾಳದಲ್ಲಿರುವ ಟಿಬೆಟಿಯನ್ ಸಮುದಾಯದವರು ಸರ್ಕಾರದ ಬಳಿ ಅನುಮತಿ ನೀಡುವಂತೆ ಮನವಿ ಮಾಡಿತ್ತು. ಆದರೆ ಭದ್ರತಾ ಕಾರಣಗಳಿಗಾಗಿ ಸರ್ಕಾರ ನಿರಾಕರಿಸಿದೆ ಎಂಬುದಾಗಿ ತಿಳಿದುಬಂದಿದೆ.


ಒಳನುಸುಳುವವರಿಂದ ಕಾನೂನು ಮತ್ತು ಶಿಸ್ತು ಪಾಲನೆಗೆ ಸಮಸ್ಯೆಯಾಗುವ ಸಂಭವವಿದೆ. ಅಲ್ಲದೆ ಒಳನುಸುಳುಕಾರರು ಕಠ್ಮಂಡುವಿನಲ್ಲಿ ಪ್ರತಿಭಟನಾ ಜಾಥಾ ನಡೆಸಿ ಆತ್ಮಾಹುತಿಗೆ ಮುಂದಾಗುವ ಸಾಧ್ಯತೆಯಿದೆ. ಆದ್ದರಿಂದ ಹುಟ್ಟು ಹಬ್ಬ ಆಚರಣೆಗೆ ಅನುಮತಿ ನಿರಾಕರಿಸಿರುವುದಾಗಿ ಕಠ್ಮಂಡುವಿನ ಸಹಾಯಕ ಜಿಲ್ಲಾಧಿಕಾರಿ ಕೃಷ್ಣಬಹಾದುರ್ ಕಟುವಾಲ್ ಹೇಳಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಟ್ಟು ಬಿಡದ ದೋಸ್ತಿ – ಸೊಪ್ಪು ಹಾಕದ ಅತೃಪ್ತರು

ಕೈ ಪಡೆ ಹಾಗೂ ತೆನೆ ಹೊತ್ತ ಮಹಿಳೆ ಪಕ್ಷಗಳ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿರುವುದು ಮೈತ್ರಿ ಮುಖಂಡರ ...

news

ಮತ್ತೊಂದು ಸರಕಾರ ರಚನೆಗೆ ರಾಜ್ಯಪಾಲರ ಆಹ್ವಾನ?

ರಾಜ್ಯದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡೋಕೆ ರಾಜ್ಯಪಾಲರು ಆಹ್ವಾನ ಕೊಡಬಹುದು, ಕಾದು ನೋಡೋಣ. ಹೀಗಂತ ...

news

ಹಿಂದುಪುರದಲ್ಲಿ ಹಿಂದುಗಳು ಮಾಡಿದ್ರು ಭಾರೀ ಒಳ್ಳೆ ಕೆಲಸ

ಹಿಂದುಪುರದಲ್ಲಿ ಹಿಂದುಗಳು ಮಾಡಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

news

ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಮಾಡಿದ್ದೇನು?

ಮಂಡ್ಯದಲ್ಲಿ ಮತ್ತೆ ರೈತ ನಾಯಕರ ಆಕ್ರೋಶ ವ್ಯಕ್ತವಾಗತೊಡಗಿದೆ.