ಕೊರೊನಾ ದಿಂದ ಬಯಲಾಯ್ತು ವ್ಯಕ್ತಿಯ ಅಕ್ರಮ ಸಂಬಂಧ

ಲಂಡನ್| pavithra| Last Modified ಶನಿವಾರ, 21 ಮಾರ್ಚ್ 2020 (07:40 IST)
ಲಂಡನ್ : ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ತಂದಿಡುತ್ತಿರುವ ಸಮಸ್ಯೆ ಒಂದೆರಡಲ್ಲ. ಈಗ ಈ ಕೊರೊನಾ ವೈರಸ್ ನಿಂದ ವ್ಯಕ್ತಿಯೊಬ್ಬನ ಅಕ್ರಮ ಸಂಬಂಧ ಬಯಲಾಗಿದೆ.

ಹೌದು. ಲಂಡನ್ ನಲ್ಲಿ ವ್ಯಕ್ತಿಯೊಬ್ಬ ಬಿಜಿನೆಸ್ ಟ್ರಿಪ್ ಎಂದು ಹೇಳಿ ಪ್ರೇಯಸಿಯ ಜೊತೆಗೆ ಎಂಜಾಯ್ ಮಾಡಲು ಇಟಲಿಗೆ ಹೋಗಿದ್ದಾನೆ. ಆದರೆ ಅಲ್ಲಿಂದ ಮರಳುತ್ತಿದ್ದನಂತೆ ಆತನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿದೆ. ತಕ್ಷಣ ಪತ್ನಿ ಆತನನ್ನು ಆಸ್ಪತ್ರೆಗೆ ದಾಖಲಿಸಿದಾಗ  ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ. 

ಇದರಿಂದ ಭಯಗೊಂಡ ಆತ ತಪಾಸಣೆಯ ವೇಳೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಬಾಯ್ಬಿಟ್ಟಿದ್ದಾನೆ. ಈ ಪ್ರಕರಣ ಎಲ್ಲಾ ಕಡೆ ವೈರಲ್ ಆಗಿದೆ.

 
ಇದರಲ್ಲಿ ಇನ್ನಷ್ಟು ಓದಿ :