ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಕಲ್ಲು-ಬಂಡೆ ಉರುಳಿ 9 ಪ್ರವಾಸಿಗರು ಸಾವು!

ಹಿಮಾಚಲ ಪ್ರದೇಶ| Ramya kosira| Last Modified ಸೋಮವಾರ, 26 ಜುಲೈ 2021 (09:50 IST)
ಹಿಮಾಚಲ ಪ್ರದೇಶ(ಜು.25): ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಸಾಂಗ್ಲಾ ಕಣಿವೆಯಲ್ಲಿರುವ ಎತ್ತರದ ಪರ್ವತದಲ್ಲಿ ಗುಡ್ಡು ಕುಸಿತ ಸಂಭವಿಸಿದೆ. ಪರಿಣಾಣ ಕಣಿವೆಗೆ ದೊಡ್ಡ ಬಂಡೆ ಕಲ್ಲುಗಳು ಉರುಳಿ ಬಿದ್ದಿವೆ. ಇದರಿಂದ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

•ಹಿಮಾಚಲ ಪ್ರದೇಶದಲ್ಲಿ ಸಂಭವಿಸಿತು ಮತ್ತೊಂದು ದುರಂತ
•ಪ್ರವಾಸಿ ತಾಣದಲ್ಲಿ ಗುಡ್ಡ ಕುಸಿತ, ಪ್ರಪಾತಕ್ಕೆ ಉರುಳಿತು ಕಲ್ಲು ಬಂಡೆ
•9 ಪ್ರವಾಸಿಗರು ಸಾವು, ಮೂವರು ಗಂಭೀರ ಗಾಯ, ಸೇತುವೆ ನೀರು ಪಾಲು

ಕಿನ್ನೌರ್ ಜಿಲ್ಲೆಯ ಸಾಂಗ್ಲಿ ಕಣಿವೆಯಲ್ಲಿ ಈ ದುರಂತ ಸಂಭವಿಸಿದೆ. ಪರ್ವತದ ಮೇಲಿನಿಂದ ದೊಡ್ಡ ಬಂಡೆ ಕಲ್ಲುಗಳು ಇದ್ದಕ್ಕಿದ್ದಂತೆ ಉರುಳಿದೆ. ಕೆಳಗೆ ಹರಿಯುತ್ತಿರುವ ನದಿಯತ್ತ ಬಂಡೆಗಳು ಉರುಳಿದೆ. ನದಿ ಇತ್ತ ಕಡೆ ಇದ್ದ ಪ್ರವಾಸಿಗರು ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿದ್ದಾರೆ.
 ಕಣಿವೆಯ ಕೆಳಭಾಗ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಹಲವು ರೆಸಾರ್ಟ್ ಇಲ್ಲಿವೆ. ಹೀಗೆ ಆಗಮಿಸಿದವರಲ್ಲಿ 9 ಮಂದಿ ಈ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ರಕ್ಷಣಾ ತಂಡವನ್ನು ನಿಯೋಜಿಸಲಾಗಿದ್ದು, ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಪ್ರವಾಸಿಗರ ಕಾರು ಸಂಪೂರ್ಣ ಪುಡಿ ಪುಡಿಯಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಅಗತ್ಯ ನೆರವು ಘೋಷಿಸಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.  ತಕ್ಷಣ  ಪರಿಹಾರ ನೀಡಲು ಸೂಚಿಸಲಾಗಿದೆ. ಇದೇ ವೇಳೆ ಗಾಯಗೊಂಡವರು ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ
 
ಇದರಲ್ಲಿ ಇನ್ನಷ್ಟು ಓದಿ :