ಅಂಗರಕ್ಷಕಿಯನ್ನು ಮದುವೆಯಾದ ಥಾಯ್ಲೆಂಡ್ ಮಹಾರಾಜ

ಥಾಯ್ಲೆಂಡ್| pavithra| Last Modified ಶುಕ್ರವಾರ, 3 ಮೇ 2019 (07:02 IST)
ಥಾಯ್ಲೆಂಡ್ : ಥಾಯ್ಲೆಂಡ್ ಮಹಾ ವಜಿರಲಾಂಗ್ ಕಾಮ್ ಬುಧವಾರ ತನ್ನ ಬೆಂಗಾವಲು ಪಡೆಯ ನಾಯಕಿಯನ್ನು ವರಿಸಿದ್ದಾರೆ.
66 ವರ್ಷದ ಥಾಯ್ಲಾಂಡ್ ರಾಜ ವಜಿರಲೊಂಗ್ ಕಾರ್ನ್ ಗೆ ಇದು ನಾಲ್ಕನೇ ಮದುವೆಯಾಗಿದ್ದು, ಆದರೆ ತಮ್ಮ ಅಂಗರಕ್ಷಕಿಯಾದ ಸುಥಿದಾ ತಿದ್ ಜಾಯಿ ಅವರನ್ನು ವಿವಾಹವಾಗಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.


ಥಾಯ್ಲೆಂಡ್ ನಲ್ಲಿ 70ವರ್ಷ ಅಧಿಕಾರ ನಡೆಸಿದ ಮಹಾರಾಜ ಭೂಮಿಬೋಲ್ ಅಬ್ದುಲ್‌ ಉದೆಜ್ ಅವರು 2016 ಅಕ್ಟೋಬರ್ ನಲ್ಲಿ ಸಾವನ್ನಪ್ಪಿದ್ದರು. ಅವರ ಮರಣಾ ನಂತರ ಸಂವಿಧಾನದ ಪ್ರಕಾರ ವಜಿರಲಾಂಗ್ ಕಾಮ್ ಮಹಾರಾಜ ಪಟ್ಟಕ್ಕೇರಿದ್ದರು. ಬುಧವಾರ ಸ್ಥಳೀಯ ಮಾಧ್ಯಮಗಳಲ್ಲಿ ಅವ್ರ ಮದುವೆ ಸಮಾರಂಭದ ವಿಡಿಯೋ ಹಾಕಲಾಗಿದ್ದು ಇದು ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :