ಒಳ ಉಡುಪುಗಳನ್ನು ಕದ್ದು ಪೊಲೀಸರ ಅತಿಥಿಯಾದ ಭೂಪ

ಟೋಕಿಯೋ| Krishnaveni K| Last Modified ಬುಧವಾರ, 8 ಸೆಪ್ಟಂಬರ್ 2021 (10:23 IST)
ಟೋಕಿಯೋ: ಮಹಿಳೆಯರ ಒಳ ಉಡುಪುಗಳನ್ನು ಕದ್ದು ಇಲ್ಲೊಬ್ಬ ಭೂಪ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಇದು ನಡೆದಿರುವುದು ಜಪಾನ್ ದೇಶದಲ್ಲಿ.
 > 56 ವರ್ಷದ ಆರೋಪಿಯ ಮನೆಗೆ ರೈಡ್ ಮಾಡಿದ ಪೊಲೀಸರೇ ಈತನ ಮನೆಯಲ್ಲಿದ್ದ ಒಳ ಉಡುಪುಗಳ ಸಂಖ್ಯೆ ನೋಡಿ ಬೆಚ್ಚಿಬಿದ್ದಿದ್ದಾರೆ. ಲಾಂಡ್ರಿ ಒಂದರಿಂದ ಕದ್ದ ಸುಮಾರು 700 ಕ್ಕೂ ಹೆಚ್ಚು ಮಹಿಳೆಯರ ಒಳ ಉಡುಪುಗಳು ಈತನ ಮನೆಯಲ್ಲಿ ಪತ್ತೆಯಾಗಿದೆಯಂತೆ.>   ಈ ಬಗ್ಗೆ ವಿಚಾರಿಸಿದಾಗ ಇದು ಆರೋಪಿಯ ವಿಚಿತ್ರ ಹವ್ಯಾಸವಾಗಿತ್ತು ಎಂದು ತಿಳಿದುಬಂದಿದೆಯಂತೆ. ಉಡುಪು ಕಾಣೆಯಾಗುತ್ತಿದ್ದರಿಂದ ಬೇಸತ್ತ ಲಾಂಡ್ರಿಯವರು ಸಿಸಿಟಿವಿ ಕ್ಯಾಮರಾ ಫಿಕ್ಸ್ ಮಾಡಿದ್ದರಂತೆ. ಇದರಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.ಇದರಲ್ಲಿ ಇನ್ನಷ್ಟು ಓದಿ :