ಮದುವೆ ಮನೆಯಲ್ಲಿ ಹಾಡು ಕೇಳಿ ವಿಚ್ಛೇದನ ನೀಡಿದ ವರ!

ಬಾಗ್ದಾದ್| Krishnaveni K| Last Modified ಮಂಗಳವಾರ, 11 ಜನವರಿ 2022 (09:50 IST)
ಬಾಗ್ದಾದ್: ಮದುವೆ ಮನೆಯಲ್ಲಿ ಹಾಕಿದ ಹಾಡು ಕೇಳಿ ಆಕ್ರೋಶಗೊಂಡ ವರ ಮದುವೆ ಮಂಟಪದಲ್ಲಿಯೇ ಆಗತಾನೇ ಮದುವೆಯಾದ ನವವಧುವಿಗೆ ನೀಡಿದ ಘಟನೆ ಬಾಗ್ದಾದ್ ನಲ್ಲಿ ನಡೆದಿದೆ.

ಸಿರಿಯನ್ ಭಾಷೆಯ ಹಾಡಿನಲ್ಲಿ ‘ನಾನು ನಿನ್ನನ್ನು ನಿಯಂತ್ರಿಸುತ್ತೇನೆ’ ಎಂಬರ್ಥದ ಸಾಲುಗಳಿವೆಯಂತೆ. ಇದುವೇ ವರನ ಆಕ್ರೋಶಕ್ಕೆ ಕಾರಣವಾಗಿರುವುದು.


ವಧುವಿನ ಮನೆಯವರು ಪ್ರಚೋದನಕಾರಿ ಹಾಡು ಹಾಕಿದ್ದಾರೆಂದು ವರ ಸ್ಥಳದಲ್ಲಿಯೇ ತಲಾಖ್ ನೀಡಿದ್ದಾನೆ. ಹಾಡು ಕೇಳಿ ವರನ ಮನೆಯವರು ವಧುವಿನ ಮನೆಯವರ ಜೊತೆ ವಾಗ್ವಾದಕ್ಕಿಳಿದಿದ್ದರು. ಬಳಿಕ ತಲಾಖ್ ನಡೆದಿದೆ. ಈ ಘಟನೆ ಈಗ ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಚರ್ಚೆಯಲ್ಲಿದೆ.


ಇದರಲ್ಲಿ ಇನ್ನಷ್ಟು ಓದಿ :