ಮರದ ದಿಮ್ಮಿ ಮೇಲೆ ಬೆಳೆದ ಈ ಟೊಮೆಟೊ ಗಿಡ ಹಲವರ ಅಚ್ಚರಿಗೆ ಕಾರಣವಾಗಿದ್ದು ಯಾಕೆ ಗೊತ್ತಾ?

ನ್ಯೂಯಾರ್ಕ್| pavithra| Last Modified ಸೋಮವಾರ, 9 ಸೆಪ್ಟಂಬರ್ 2019 (09:08 IST)
ನ್ಯೂಯಾರ್ಕ್ : ನ್ಯೂಯಾರ್ಕ್‌ ನ ಪೂರ್ವ ನದಿಯ ಮರದ ದಿಮ್ಮಿ ಮೇಲೆ ಬೆಳೆದ  ಟೊಮೆಟೊ ಗಿಡವೊಂದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ನ್ಯೂಯಾರ್ಕ್‌ನ ಪೂರ್ವ ನದಿಯ ಮಧ್ಯದಲ್ಲಿ ಹಲವು ಮರದ ದಿಮ್ಮಿಗಳಿವೆ. ಅದರಲ್ಲೊಂದು ಮರದ ದಿಮ್ಮಿಯ ಮೇಲೆ ಟೊಮೆಟೊ ಗಿಡವೊಂದು ಬೆಳೆದಿದ್ದು, ಈ ಗಿಡದಲ್ಲಿ ಒಂದು ಟೊಮೆಟೊ ಹಣ್ಣು ಬಿಟ್ಟಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನದಿಯ ಮಧ್ಯೆ ಗಿಡ ನೆಟ್ಟಿರುವವರು ಯಾರು ಎನ್ನುವ ಪ್ರಶ್ನೆ ಇದೀಗ ಹಲವರಲ್ಲಿ ಮೂಡಿದೆ.


ಇದಕ್ಕೆ ಉತ್ತರಿಸಿದ ಮಾಥ್ಯೂ ಫ್ರೇ, ಸಹಜವಾಗಿ ಹಕ್ಕಿಗಳು ವಿವಿಧ ಸಸ್ಯದ ಹಣ್ಣುಗಳನ್ನು ತಂದು ಮರದ ತುಂಡಿನ ಮೇಲೆ ತಿನ್ನುತ್ತಿದ್ದರಿಂದ ಅದರಲ್ಲಿರುವ ಬೀಜ ಮೊಳಕೆ ಒಡೆದು ಈ ರೀತಿ ಗಿಡ ಹುಟ್ಟುತ್ತವೆ ಎಂದಿದ್ದಾರೆ. ಇದಕ್ಕೆ ಕೆಲವು ನೆಟ್ಟಿಗರು ದೇವರ ಸೃಷ್ಟಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :