ಭಾರತದ ಮೇಲೆ ಸೈಬರ್ ದಾಳಿಗೆ ಸಿದ್ಧತೆ ನಡೆಸಿದ್ದ ಪಾಕ್

ನವದೆಹಲಿ| Krishnaveni K| Last Modified ಬುಧವಾರ, 14 ಜುಲೈ 2021 (10:25 IST)
ನವದೆಹಲಿ: ಭಾರತದ ಮೇಲೆ ಗಡಿಯಲ್ಲಿ ಗುದ್ದಾಡಿ ಏಟು ತಿನ್ನುತ್ತಿರುವ ಪಾಕಿಸ್ತಾನ ಈಗ ಸೈಬರ್ ದಾಳಿ ನಡೆಸಲು ಮುಂದಾಗಿದೆ.

 
ಭಾರತದಲ್ಲಿ ಈ ವರ್ಷ ಸರ್ಕಾರಿ ಸಂಸ್ಥೆಗಳು ಮತ್ತು ವಿದ್ಯುತ್ ಜಾಲದ ಮೇಲೆ ಮಾಲ್ವೇರ್ ಸೃಷ್ಟಿಸಿ ಸೈಬರ್ ದಾಳಿ ನಡೆಸಲು ಪಾಕ್ ಸಿದ್ಧತೆ ನಡೆಸಿತ್ತು ಎಂದು ಅಮೆರಿಕಾ ಮೂಲದ ಸಂಸ್ಥೆ ಬ್ಲ್ಯಾಕ್ ಲೋಟಸ್ ಎಚ್ಚರಿಕೆ ನೀಡಿದೆ.
 
ಇದಕ್ಕಾಗಿ ಹ್ಯಾಕರ್ ಗಳು ಹೊಸ ಮಾದರಿಯ ರಿಮೋಟ್ ಆಕ್ಸಿಸ್ ಟ್ರೋಜನ್ ಸೃಷ್ಟಿಸಿ ಇನ್ ಸ್ಟಾಲ್ ಮಾಡಿದ್ದರು. ಇದಕ್ಕಾಗಿ ಭಾರತದಲ್ಲಿ ಬಳಕೆಯಾಗುವ ಡೊಮೈನ್ ಯುಆರ್ ಎಲ್ ಗಳನ್ನೇ ಬಳಸಿದ್ದರು ಎನ್ನಲಾಗಿದೆ. ಇದರಿಂದ ಒಬ್ಬರ ಸಿಸ್ಟಂನಲ್ಲಿರುವ ಮಾಹಿತಿಯ ಮೇಲೆ ಹದ್ದಿನಗಣ್ಣಿಡುವುದು ಮತ್ತು ಮಾಹಿತಿ ಕದಿಯಲು ಸಾಧ‍್ಯವಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :