Widgets Magazine

ಎಡವಟ್ಟು ಟ್ವೀಟ್ ಮಾಡಿ ಮುಜುಗರಕ್ಕೀಡಾದ ಪಾಕಿಸ್ತಾನದ ರಾಯಭಾರಿ ಬಸಿತ್

ಪಾಕಿಸ್ತಾನ| pavithra| Last Modified ಬುಧವಾರ, 4 ಸೆಪ್ಟಂಬರ್ 2019 (09:04 IST)
: ಭಾರತದಲ್ಲಿ ಪಾಕಿಸ್ತಾನದಿಂದ ಹೈಕಮಿಷನರ್ ಆಗಿದ್ದ ಅಬ್ದುಲ್ ಬಾಸಿತ್ ಕಲ್ಲು ತೂರಾಟದಲ್ಲಿ ದೃಷ್ಟಿ ಕಳೆದುಕೊಂಡ ಕಾಶ್ಮೀರಿ ವ್ಯಕ್ತಿ ಎಂದು ವಯಸ್ಕರ ಚಿತ್ರಗಳ ತಾರೆಯೊಬ್ಬರ ಫೋಟೋ ಟ್ವೀಟ್ ಮಾಡಿ ಭಾರೀ ಮುಜುಗರಕ್ಕೀಡಾಗಿದ್ದಾರೆ. ಭಾರತದಲ್ಲಿನ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್, ಪೋರ್ನ್ ತಾರೆ ಜಾನಿ ಸಿನ್ಸ್ ಅವರ ಭಾವಚಿತ್ರ ಹಾಕಿ ಕಾಶ್ಮೀರದಲ್ಲಿ ಭಾರತೀಯ ಭದ್ರತಾಪಡೆ ಸಿಬ್ಬಂದಿ ಸಿಡಿಸುವ ಗುಂಡಿನ ತುಣುಕು ಬಡಿದು ಗಾಯಗೊಂಡಿರುವ ಕಾಶ್ಮೀರ ಯುವಕ ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನು ನೋಡಿದ ಪಾಕಿಸ್ತಾನ ಮೂಲದ ಪತ್ರಕರ್ತರಾದ ನಾಯಲಾ ಇನಾಯತ್ ಅವರು, ಅಬ್ದುಲ್ ಬಾಸಿತ್ ಅವರು ಜಾನಿ ಸಿನ್ಸ್ ಫೋಟೋ ಹಾಕಿ, ಕಲ್ಲು ತೂರಾಟದಲ್ಲಿ ದೃಷ್ಟಿ ಕಳೆದುಕೊಂಡ ಕಾಶ್ಮೀರಿ ವ್ಯಕ್ತಿ ಎಂದು ಹಾಕಿದ್ದಾರೆ. ಇದು ನಿಜವಲ್ಲ. ಜಮ್ಮು- ಕಾಶ್ಮೀರದ ಅನಂತನಾಗ್ ನ ಯೂಸೂಫ್ ಕಲ್ಲು ತೂರಾಟದಲ್ಲಿ ದೃಷ್ಟಿ ಕಳೆದುಕೊಂಡಿದ್ದು ಎಂದು ತಿಳಿಸಿದ್ದಾರೆ. ಕೊನೆಗೆ ಈ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :