ವ್ಯಕ್ತಿಯೊಬ್ಬ ಮೂತ್ರ ಮಾಡಲು ಅಧ್ಯಕ್ಷ ಟ್ರಂಪ್ ನ ಪುತ್ಥಳಿ ಇಟ್ಟಿದ್ದು ಯಾಕೆ?

ಅಮೇರಿಕಾ, ಶನಿವಾರ, 13 ಅಕ್ಟೋಬರ್ 2018 (06:49 IST)

ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯ ಬಗ್ಗೆ ಹಲವರಿಗೆ ವಿರೋಧವಿದೆ. ಆದರೆ ವ್ಯಕ್ತಿಯೊಬ್ಬ ಅದನ್ನು ತೋರ್ಪಡಿಸಿದ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಾದ್ರೆ ಆತ ಮಾಡಿದ್ದಾದರೂ ಏನು ಗೊತ್ತಾ?


ಜಾಹೀರಾತು ಸಂಸ್ಥೆಯೊಂದರ ಮುಖ್ಯಸ್ಥ ಫಿಲ್ ಗೇಬಲ್ ಎಂಬಾತ ನ್ಯೂಯಾರ್ಕ್‍ನ ಬ್ರೂಕ್ಲಿನ್‍ ಎಂಬ ಪ್ರದೇಶದ ಅಲ್ಲಲ್ಲಿ ಟ್ರಂಪ್ ಪುತ್ಥಳಿಗಳನ್ನು ಇಟ್ಟು, ಅದರ ಕೆಳಗೆ “ಇಲ್ಲಿ ಮೂತ್ರ ಮಾಡಿ” ಎಂದು ಬರೆಸಿದ್ದಾನೆ. ಅಷ್ಟೇ ಅಲ್ಲದೇ ನಾಯಿಗಳನ್ನೂ ಸೆಳೆಯುವಂತಹ ವಸ್ತುಗಳನ್ನು ಈ ಫಲಕಗಳ ಬಳಿ ಸಿಂಪಡಿಸಿದ್ದಾನಂತೆ.


ಈ ವಿಚಾರವನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಅಮೆರಿಕ ಅಧ್ಯಕ್ಷನಾಗಿ ಹಾಗೂ ವೈಯಕ್ತಿಕವಾಗಿ ಟ್ರಂಪ್ ತೋರಿರುವ ನಿಲುವುಗಳ ಬಗ್ಗೆ ನನ್ನ ಅಸಹನೆ-ಧಿಕ್ಕಾರವನ್ನು ಅಭಿವ್ಯಕ್ತಿಪಡಿಸುವ ಸಲುವಾಗಿ ಹೀಗೆ ಹಾಕಿಸಿದ್ದೇನೆ ಎಂದು ತಿಳಿಸಿದ್ದಾನೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇವಲ 500 ರೂ. ಗಾಗಿ ವ್ಯಕ್ತಿಯ ಜೀವ ತೆಗೆದ ಪಾತಕರು

ಚಂಡೀಗಢ : ಕೇವಲ 500 ರೂಪಾಯಿಗಾಗಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಜೀವ ತೆಗೆದ ಘಟನೆ ಹರಿಯಾಣದ ಪಲ್ವಾಲ್ ...

news

ಪ್ರಕಾಶ್ ರೈ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬಂಡ್ಲರಹಟ್ಟಿ ಗ್ರಾಮಸ್ಥರು

ಬೆಂಗಳೂರು : ನಟ ಪ್ರಕಾಶ್ ರೈ ಮೇಲೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮದ ಜನರು ಆಕ್ರೋಶ ...

news

ಪಬ್‍ಜೀ ಆನ್‍ಲೈನ್ ಗೇಮ್‍ ಚಟದಿಂದ ತನ್ನವರನ್ನೆ ಕೊಲೆ ಮಾಡಿದ 19 ವರ್ಷದ ಯುವಕ

ನವದೆಹಲಿ : ಪಬ್‍ಜೀ ಆನ್‍ಲೈನ್ ಗೇಮ್‍ ನ ಚಟಕ್ಕೆ ಬಿದ್ದು 19 ವರ್ಷದ ಯುವಕನೊಬ್ಬ ಹೆತ್ತ ತಂದೆ ತಾಯಿ ಹಾಗೂ ...

news

ಹೈ.ಕ. ಜಿಲ್ಲೆಗಳ ಅಭಿವೃದ್ಧಿ ಚರ್ಚೆಗಾಗಿ ಶೀಘ್ರವೇ ಸಭೆ

ಹೈ.ಕ. ಪ್ರದೇಶದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶೀಘ್ರದಲ್ಲಿ ಆರು ಜಿಲ್ಲೆಗಳ ಸಂಸದರು, ಜಿಲ್ಲಾ ...