Widgets Magazine

ಧೋನಿಯನ್ನು ಮಂಕಡ್ ಔಟ್ ಮಾಡಲು ಹೊರಟ ಕೃಣಾಲ್ ಪಾಂಡ್ಯ! ಕೊನೆಗೆ ಆಗಿದ್ದೇನು?

ಮುಂಬೈ| Krishnaveni K| Last Modified ಗುರುವಾರ, 4 ಏಪ್ರಿಲ್ 2019 (11:00 IST)
ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿದ್ದು ವಿವಾದವಾಗಿದ್ದು ಯಾರೂ ಮರೆತಿಲ್ಲ.
 
ಇದೀಗ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿಯನ್ನು ಮಂಕಡ್ ಔಟ್ ಮಾಡಲು ಹೊರಟ ಘಟನೆ ನಡೆದಿದೆ. ಆದರೆ ಧೋನಿ ಮೈದಾನದಲ್ಲಿ ಮೈಮರೆಯುವವರಲ್ಲ. ಹೀಗಾಗಿ ಬಚಾವ್ ಆದರು.
 
ಬಾಲ್ ಎಸೆಯುವಂತೆ ನಾಟಕ ಮಾಡಿ ಕೃಣಾಲ್ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಧೋನಿಯನ್ನು ರನೌಟ್ ಮಾಡಲು ಹೊರಟಾಗ ಇದನ್ನು ಮೊದಲೇ ಊಹಿಸಿದ ಧೋನಿ ಬ್ಯಾಟ್ ನ್ನು ಕ್ರೀಸ್ ನಿಂದ ತೆಗೆಯದೇ ತಮ್ಮ ಜಾಣ್ಮೆ ಪ್ರದರ್ಶಿಸಿದರು. ಇದನ್ನು ನೋಡಿ ಇನ್ನೊಂದು ತುದಿಯಲ್ಲಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಗೆ ನಗುವೋ ನಗು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :