ಐಪಿಎಲ್ ಗೆ ಆಘಾತ: ಡೆಲ್ಲಿ ಸ್ಪಿನ್ನರ್ ಅಕ್ಸರ್ ಪಟೇಲ್ ಗೆ ಕೊರೋನಾ

ನವದೆಹಲಿ| Krishnaveni K| Last Modified ಭಾನುವಾರ, 4 ಏಪ್ರಿಲ್ 2021 (08:59 IST)
ನವದೆಹಲಿ: ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ಐಪಿಎಲ್ ನಲ್ಲಿ ಈಗ ಕೊರೋನಾ ಭೀತಿ ಆವರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಅಕ್ಸರ್ ಪಟೇಲ್ ಗೆ ಕೊರೋನಾ ತಗುಲಿರುವುದು ಕೂಟದ ಮೇಲೆ ಭೀತಿ ಆವರಿಸಿದೆ.

 
ಇದಕ್ಕೂ ಮೊದಲು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಿತೀಶ್ ರಾಣಾಗೆ ಕೊರೋನಾ ದೃಢಪಟ್ಟಿತ್ತು. ಇದೀಗ ಅಕ್ಸರ್ ಪಟೇಲ್ ಗೂ ಕೊರೋನಾ ಪಾಸಿಟಿವ್ ಬಂದಿರುವುದು, ಕ್ರಿಕೆಟಿಗರಲ್ಲಿ ಆತಂಕ ಮನೆ ಮಾಡಿದೆ.
 
ಬಯೋ ಸೆಕ್ಯೂರ್ ವಾತಾವರಣದಲ್ಲಿದ್ದರೂ ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಅಕ್ಸರ್ ಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡೆಲ್ಲಿ ಫ್ರಾಂಚೈಸಿ ಪ್ರಕಟಣೆ ತಿಳಿಸಿದೆ.
ಇದರಲ್ಲಿ ಇನ್ನಷ್ಟು ಓದಿ :