Widgets Magazine

ಕ್ರೀಡಾಕೂಟಕ್ಕೆ ಅನುಮತಿ ಸಿಕ್ಕರೂ ಐಪಿಎಲ್ ನಡೆಸುವುದು ಕಷ್ಟ

ಮುಂಬೈ| Krishnaveni K| Last Modified ಮಂಗಳವಾರ, 19 ಮೇ 2020 (09:09 IST)
ಮುಂಬೈ: ಲಾಕ್ ಡೌನ್ 4 ನಿಯಮಾವಳಿ ಪ್ರಕಾರ ಖಾಲಿ ಮೈದಾನಗಳಲ್ಲಿ ಕ್ರೀಡಾಕೂಟ ನಡೆಸಲು ಅವಕಾಶವಿದೆ. ಆದರೆ ಈ ತೀರ್ಮಾನ ಐಪಿಎಲ್ ಗೆ ಲಾಭವಾಗದು.
 

ಪ್ರೇಕ್ಷಕರಿಲ್ಲದೇ ಕ್ರಿಕೆಟೇತರ ಕ್ರೀಡೆಗಳನ್ನು ಆಯೋಜಿಸಬಹುದು. ಆದರೆ ಕ್ರಿಕೆಟ್ ನಲ್ಲಿ ಪ್ರೇಕ್ಷಕರೂ ಅಷ್ಟೇ ಮುಖ್ಯ. ಅದರಲ್ಲೂ ಐಪಿಎಲ್ ನಲ್ಲಿ ಕ್ರೀಡೆಗಳಲ್ಲಿ ಪ್ರೇಕ್ಷಕರೇ ಆದಾಯದ ಮುಖ್ಯ ವಾಹಿನಿಗಳು.
 
ಇದಲ್ಲದೆ, ಸರ್ಕಾರ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನೂ ನಿರ್ಬಂಧಿಸಿದೆ. ಹೀಗಾಗಿ ಆಟಗಾರರಿಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು ಸಾಧ‍್ಯವಿಲ್ಲ. ಹೀಗಾಗಿ ಸದ್ಯಕ್ಕೆ ಐಪಿಎಲ್ ಬಗ್ಗೆ ಏನೂ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಇದರಲ್ಲಿ ಇನ್ನಷ್ಟು ಓದಿ :