ಚೆನ್ನೈ|
Krishnaveni K|
Last Modified ಗುರುವಾರ, 21 ಜನವರಿ 2021 (08:37 IST)
ಚೆನ್ನೈ: 2020 ರ ಐಪಿಎಲ್ ನಲ್ಲಿ ಕೊನೆಯ ಕ್ಷಣದಲ್ಲಿ ವೈಯಕ್ತಿಕ ಕಾರಣ ನೀಡಿ ತಂಡದಿಂದ ಹೊರನಡೆದ ಸುರೇಶ್ ರೈನಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಚಾನ್ಸ್ ಕೊಟ್ಟಿದೆ.
ಮುಂದಿನ ಐಪಿಎಲ್ ಗೆ ಸಿಎಸ್ ಕೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ ಹಾಗೂ ಮುರಳಿ ವಿಜಯ್ ರನ್ನು ಕೈ ಬಿಟ್ಟಿದೆ. ಆದರೆ ಸುರೇಶ್ ರೈನಾಗೆ ಮತ್ತೊಂದು ಅವಕಾಶ ನೀಡುವ ಮನಸ್ಸು ಮಾಡಿದೆ. ಇದರಿಂದಾಗಿ ಮುಂದಿನ ಐಪಿಎಲ್ ಗೆ ಮತ್ತೆ ಚಿನ್ನ ತಲೈವಾ ರೈನಾ ಸಿಎಸ್ ಕೆಗೆ ವಾಪಸಾಗಲಿದ್ದಾರೆ.