ಸಮವಸ್ತ್ರದಿಂದ ಆಲ್ಕೋಹಾಲ್ ಬ್ರ್ಯಾಂಡ್ ಕಿತ್ತು ಹಾಕಲು ನಿರ್ಧರಿಸಿದ ಸಿಎಸ್ ಕೆ

ಚೆನ್ನೈ| Krishnaveni K| Last Modified ಸೋಮವಾರ, 5 ಏಪ್ರಿಲ್ 2021 (09:07 IST)
ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಸಮವಸ್ತ್ರದಿಂದ ಆಲ್ಕೋಹಾಲ್ ಬ್ರ್ಯಾಂಡ್ ನ ಲೋಗೋ ಕಿತ್ತು ಹಾಕಲು ನಿರ್ಧರಿಸಿದೆ.
 

ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ ಆಲ್ಕೋಹಾಲ್ ಬ್ರ್ಯಾಂಡ್ ಲೋಗೋ ತೊಡುವುದರಿಂದ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಈ ಲೋಗೋ ಹಾಕಿಕೊಳ್ಳಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಸಿಎಸ್ ಕೆ ಈ ನಿರ್ಧಾರಕ್ಕೆ ಬಂದಿದೆ.
 
ಎಸ್ಎನ್ ಜೆ ಡಿಸ್ಟಿಲರೀಸ್ ಕಂಪನಿಯೂ ಚೆನ್ನೈ ತಂಡದ ಪ್ರಾಯೋಜಕರಲ್ಲಿ ಒಬ್ಬರು. ಆದರೆ ಇದು ಆಲ್ಕೋಹಾಲ್ ನಿರ್ಮಾಣ ಮಾಡುವ ಕಂಪನಿಯಾಗಿದ್ದರಿಂದ ಇದರ ಲೋಗೋ ತೊಟ್ಟುಕೊಳ್ಳಲ್ಲ ಎಂದು ಮೊಯಿನ್ ಹೇಳಿದ್ದರು. ಇದರ ಬೆನ್ನಲ್ಲೇ ಸಿಎಸ್ ಕೆ ಈ ಕ್ರಮಕೈಗೊಂಡಿದೆ.
ಇದರಲ್ಲಿ ಇನ್ನಷ್ಟು ಓದಿ :