ಆರ್ ಸಿಬಿ ಮಾಡಿದ ಕೆಲಸವನ್ನೇ ಮಾಡಲಿರುವ ಡೆಲ್ಲಿ ಕ್ಯಾಪಿಟಲ್ಸ್

ದುಬೈ| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (10:58 IST)
ದುಬೈ: ರಲ್ಲಿ ಕೊರೋನಾ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಲು ರಾಯಲ್ ಚಾಲೆಂಜ್ ಬೆಂಗಳೂರು ತಂಡ ತನ್ನ ಜೆರ್ಸಿಯಲ್ಲಿ ಟು ಕೋವಿಡ್ ಹೀರೋಸ್ ಎಂದು ಬರೆಯಿಸಿಕೊಳ್ಳುತ್ತಿರುವ ವಿಚಾರ ಓದಿರುತ್ತೀರಿ.

 
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಆರ್ ಸಿಬಿ ಹಾದಿಯಲ್ಲಿ ಸಾಗಲಿದೆ. ಡೆಲ್ಲಿ ತಂಡದ ಕ್ರಿಕೆಟಿಗರೂ ಐಪಿಎಲ್ ಕೂಟದ ವೇಳೆ ತಮ್ಮ ಜೆರ್ಸಿಯಲ್ಲಿ ಕೊವಿಡ್ ಹೀರೋಸ್ ಎಂದು ಬರೆಯಿಸಿಕೊಂಡು ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಲಿದ್ದಾರೆ. ಕೊರೋನಾ ಬಳಿಕ ನಡೆಯುತ್ತಿರುವ ಬಹುದೊಡ್ಡ ಕ್ರಿಕೆಟ್ ಕೂಟ ಇದಾಗಿದ್ದು, ಈ ಮೂಲಕ ಜಗತ್ತಿನಾದ್ಯಂತ ಕೆಲಸ ಮಾಡಿದ ಎಲ್ಲಾ ಕೊರೋನಾ ವಾರಿಯರ್ಸ್ ಗಳನ್ನೂ ಸ್ಮರಿಸಲಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :