ಭಾರತದಲ್ಲೇ ಐಪಿಎಲ್ ನಡೆಸಲು ಶ್ರಮಿಸುವುದಾಗಿ ಭರವಸೆ ನೀಡಿದ ಗಂಗೂಲಿ

ಮುಂಬೈ| Krishnaveni K| Last Modified ಗುರುವಾರ, 9 ಜುಲೈ 2020 (09:17 IST)
ಮುಂಬೈ: ಕೊರೋನಾ ಕಾರಣದಿಂದ ಈ ವರ್ಷದ ಐಪಿಎಲ್ ನ್ನು ಬೇರೆ ದೇಶದಲ್ಲಿ ಆಯೋಜಿಸಲು ಬಿಸಿಸಿಐ ತಯಾರಿ ನಡೆಸಿರುವುದು ಭಾರತದ ಅಭಿಮಾನಿಗಳಿಗೆ ಬೇಸರ ತಂದಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಮಾನಿಗಳಿಗೆ ಭರವಸೆಯಿಟ್ಟಿದ್ದಾರೆ.
 

ಆದಷ್ಟು ಭಾರತದಲ್ಲೇ ಈ ವರ್ಷದ ಐಪಿಎಲ್ ನಡೆಸಲು ಪ್ರಯತ್ನಿಸುತ್ತೇವೆ ಎಂದು ಗಂಗೂಲಿ ಭರವಸೆ ನೀಡಿದ್ದಾರೆ. ನಮಗೆ ಐಪಿಎಲ್ ನಡೆಸಲು 35 ರಿಂದ 40 ದಿನಗಳು ಸಾಕು. ಆದರೆ ಭಾರತದಲ್ಲಿ ಪರಿಸ್ಥಿತಿ ಸುಧಾರಿಸಬೇಕು. ಹೀಗಾಗಿ ಎಲ್ಲಿ ನಡೆಸಬೇಕು ಎಂದು ತೀರ್ಮಾನವಾಗಿಲ್ಲ. ನಮ್ಮ ಮೊದಲ ಆದ್ಯತೆ ಭಾರತವೇ ಆಗಿರುತ್ತದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :