Widgets Magazine

ಐಪಿಎಲ್ 13 ಆರಂಭಕ್ಕೆ ಕ್ಷಣಗಣನೆ: ಕಾಮೆಂಟೇಟರ್ ಗಳೇ ಸ್ಟಾರ್ ಗಳು

ದುಬೈ| Krishnaveni K| Last Modified ಶುಕ್ರವಾರ, 18 ಸೆಪ್ಟಂಬರ್ 2020 (10:04 IST)
ದುಬೈ: ಕೊರೋನಾ ನಡುವೆಯೂ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಕಾಮೆಂಟೇಟರ್ ಗಳೇ ಅಭಿಮಾನಿಗಳ ಪಾಲಿಗೆ ಹೀರೋಗಳಾಗಲಿದ್ದಾರೆ.

 
ಕೊರೋನಾ ಕಾರಣದಿಂದ ನೇರವಾಗಿ ಮೈದಾನದಲ್ಲಿ ಐಪಿಎಲ್ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗಿಲ್ಲ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಆಯಾ ಭಾಷೆಗಳಲ್ಲಿ ದಿಗ್ಗಜ ಕ್ರಿಕೆಟಿಗರಿಂದಲೇ ಕಾಮೆಂಟರಿ ನಡೆಸಲಿದೆ. ಇಂಗ್ಲಿಷ್, ಹಿಂದಿ, ಅಲ್ಲದೆ ತಮಿಳು, ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲೂ ಕಾಮೆಂಟರಿ ಇರಲಿದೆ. ಇದಕ್ಕಾಗಿ ದಿಗ್ಗಜರ ಪಟ್ಟಿಯನ್ನೇ ಮಾಡಿಕೊಂಡಿದೆ. ನಾಳೆ ಮೊದಲು ಪಂದ್ಯ ಚೆನ್ನೈ ಮತ್ತು ಮುಂಬೈ ನಡುವೆ ರಾತ್ರಿ 7.30 ಕ್ಕೆ ಆರಂಭವಾಗಲಿದ್ದು, ಇದರ ನೇರಪ್ರಸಾರವನ್ನು ಸ್ಟಾರ್ ಸಮೂಹ ಸಂಸ್ಥೆಯ ವಾಹಿನಿಗಳಲ್ಲಿ ವೀಕ್ಷಿಸಬಹುದಾಗಿದೆ.
ಇದರಲ್ಲಿ ಇನ್ನಷ್ಟು ಓದಿ :