Widgets Magazine

ಐಪಿಎಲ್ 13 ಕದನ ಕಣದಲ್ಲಿ ಮುಂಬೈ v/s ಚೆನ್ನೈ: ಉಭಯ ತಂಡಗಳ ಮ್ಯಾಚ್ ವಿನ್ನರ್ ಯಾರು?

ದುಬೈ| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (09:48 IST)
ದುಬೈ: ರ ಮೊದಲ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದ್ದು, ರೋಹಿತ್ ಶರ್ಮಾ ಮತ್ತು ಧೋನಿ ಬಳಗದ ಬಲಾಬಲ ನೋಡೋಣ.

 
ಎರಡೂ ತಂಡಗಳೂ ಬಲಾಢ್ಯ ತಂಡಗಳೇ. ಚಾಂಪಿಯನ್ ತಂಡ, ಚಾಂಪಿಯನ್ ಆಟಗಾರರನ್ನು ಹೊಂದಿರುವುದರಿಂದ ಯಾರು ಗೆಲ್ಲಲುತ್ತಾರೆ ಎಂದು ಮೇಲ್ನೋಟಕ್ಕೆ ಊಹಿಸುವುದು ಕಷ್ಟ. ಹೀಗಾಗಿ ಪ್ರೇಕ್ಷಕರಿಗೆ ಇದೊಂದು ರೋಚಕ ಕದನವಾಗಬಹುದು.
 
ಮುಂಬೈ ಇಂಡಿಯನ್ಸ್ ಗೆ ನಾಯಕ ರೋಹಿತ್ ಶರ್ಮಾ ಜತೆಗೆ ಹಾರ್ದಿಕ್ ಪಾಂಡ್ಯ ಕೂಡಾ ನಿರ್ಣಾಯಕರಾಗಬಲ್ಲರು. ಜಸ್ಪ್ರೀತ್ ಬುಮ್ರಾ ಒಳಗೊಂಡ ವೇಗದ ಬೌಲಿಂಗ್ ಪಡೆ ಕೂಡಾ ಪ್ರಬಲವಾಗಿದೆ. ಆದರೆ ಅತ್ತ ಚೆನ್ನೈ ಕೂಡಾ ಸಾಮಾನ್ಯ ತಂಡವಲ್ಲ. ಇಲ್ಲಿ ಅನುಭವಿಗಳಿಗೆ ಕೊರತೆಯಿಲ್ಲ. ಶೇನ್ ವ್ಯಾಟ್ಸನ್ ಆರಂಭದ ಶಕ್ತಿ, ಧೋನಿಯ ಫಿನಿಶಿಂಗ್ ಟಚ್ ತಂಡದ ಶಕ್ತಿ. ಜತೆಗೆ ಇಮ್ರಾನ್ ತಾಹಿರ್ ಇಲ್ಲಿನ ನಿಧಾನಗತಿಯ ಪಿಚ್ ನಲ್ಲಿ ಮ್ಯಾಜಿಕ್ ಮಾಡಬಲ್ಲರು. ಹೀಗಾಗಿ ಎರಡೂ ತಂಡಗಳೂ ಬಲಾಢ್ಯವಾಗಿದ್ದು, ಒಂದು ರೋಚಕ ಪಂದ್ಯವಾಗುವುದರಲ್ಲಿ ಡೌಟೇ ಇಲ್ಲ.
ಇದರಲ್ಲಿ ಇನ್ನಷ್ಟು ಓದಿ :