ಐಪಿಎಲ್ ನ ಹೊಸ ನಿಯಮ ಪಾಲಿಸುವುದೇ ಕ್ರಿಕೆಟಿಗರಿಗೆ ಸವಾಲು

ದುಬೈ| Krishnaveni K| Last Modified ಭಾನುವಾರ, 13 ಸೆಪ್ಟಂಬರ್ 2020 (09:20 IST)
ದುಬೈ: ಕೊರೋನಾ ಬಳಿಕ ಆಯೋಜನೆಗೊಂಡಿರುವ ದೊಡ್ಡ ಕ್ರಿಕೆಟ್ ಜಾತ್ರೆ ಐಪಿಎಲ್. ಹಾಗಿದ್ದರೂ ಕೂಟದ ನಡುವೆ ಆಟಗಾರರಿಗೆ ಮಹಾಮಾರಿಯ ಭೀತಿ ಇದ್ದೇ ಇದೆ.

 
ಕೊರೋನಾ ಕಾರಣದಿಂದಾಗಿ ಇತ್ತೀಚೆಗೆ ಕ್ರಿಕೆಟ್ ನಲ್ಲೂ ಕೆಲವು ಬದಲಾವಣೆಗಳಾಗಿವೆ. ಚೆಂಡಿನ ಮೇಲೆ ಹೊಳಪು ಬರಿಸಲು ಜೊಲ್ಲು ಬಳಕೆ ನಿಷೇಧಿಸಿರುವುದು, ಪರಸ್ಪರ ತಬ್ಬಿಕೊಂಡು ವಿಕೆಟ್ ಬಿದ್ದಾಗ ಸೆಲೆಬ್ರೇಷನ್ ಮಾಡುವುದು ಎಲ್ಲವೂ ಬದಲಾಗಿದೆ. ಹೀಗಾಗಿ ಈ ಬದಲಾದ ನಿಯಮಗಳಿಗೆ ಹೊಂದಿಕೊಂಡು ಆಟಗಾರರು ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಯಾವ ರೀತಿ ಮನರಂಜನೆ ಒದಗಿಸಬೇಕು ಎಂಬ ಬಗ್ಗೆ ಕ್ರಿಯಾತ್ಮಕವಾಗಿ ಯೋಚಿಸಬೇಕಾಗಿದೆ. ಹೀಗಾಗಿ ಆಟಗಾರರಿಗೆ ಆಟದ ಜತೆಗೆ ಹೊಸ ನಿಯಮಗಳನ್ನು ಪಾಲಿಸುವುದೇ ದೊಡ್ಡ ತಲೆನೋವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :