ಐಪಿಎಲ್ 14: ಗೆಲುವಿನ ಉತ್ಸಾಹದಲ್ಲಿರುವ ಚೆನ್ನೈಗೆ ಹೈದರಾಬಾದ್ ಎದುರಾಳಿ

ನವದೆಹಲಿ| Krishnaveni K| Last Modified ಬುಧವಾರ, 28 ಏಪ್ರಿಲ್ 2021 (09:44 IST)
ನವದೆಹಲಿ: ಸತತ ಗೆಲುವಿನಿಂದ ಗೆದ್ದು ಬೀಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇಂದು ಸನ್ ರೈಸರ್ಸ್ ಹೈದರಾಬಾದ್ ಎದುರಾಳಿಯಾಗಿದೆ.  
> ಇಂದಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಚೆನ್ನೈ ಫೇವರಿಟ್ ತಂಡ ಎನಿಸುತ್ತದೆ. ಸತತ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಈಗ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಸೋಲಿಸಿ ನಾಕೌಟ್ ಹಂತಕ್ಕೆ ತನ್ನ ಅವಕಾಶ ಮತ್ತಷ್ಟು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.>   ಅತ್ತ ಹೈದರಾಬಾದ್ ಗೆ ಇನ್ ಫಾರ್ಮ್ ಆಲ್ ರೌಂಡರ್ ರವೀಂದ್ರ ಜಡೇಜಾದ್ದೇ ಚಿಂತೆ. ಹೈದರಾಬಾದ್ ಗೆ ಇದುವರೆಗೆ ಕೇವಲ ಒಂದೇ ಗೆಲುವು ದಕ್ಕಿರುವುದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕೈ ಕೊಟ್ಟಿರುವುದು ಆ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :