ಐಪಿಎಲ್ 14: ದಿಡೀರ್ ಹೈದರಾಬಾದ್ ನಾಯಕನೇ ಬದಲು

ಮುಂಬೈ| Krishnaveni K| Last Modified ಭಾನುವಾರ, 2 ಮೇ 2021 (09:26 IST)
ಮುಂಬೈ: ರಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವೇ ಬದಲಾಗಿದೆ.

 
ಇದುವರೆಗೆ ತಂಡವನ್ನು ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್ ಮುನ್ನಡೆಸಿದ್ದರು. ಆದರೆ ವಾರ್ನರ್ ನೇತೃತ್ವದಲ್ಲಿ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದರಿಂದಾಗಿ ದಿಡೀರ್ ನಾಯಕತ್ವ ಬದಲಾವಣೆ ಮಾಡಲಾಗಿದೆ.
 
ಇದೀಗ ನ್ಯೂಜಿಲೆಂಡ್ ಮೂಲದ ಕೇನ್ ವಿಲಿಯಮ್ಸನ್ ಗೆ ನಾಯಕತ್ವ ವಹಿಸಲಾಗಿದೆ. ಮುಂದಿನ ಪಂದ್ಯಗಳಿಗೆ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಡೇವಿಡ್ ವಾರ್ನರ್ ಒಬ್ಬ ಅನುಭವಿ ಆಟಗಾರನಾಗಿ ತಂಡಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಹೈದರಾಬಾದ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಲ್ಲಿ ಇನ್ನಷ್ಟು ಓದಿ :