ಐಪಿಎಲ್ 14: ನಾಯಕತ್ವ ಬದಲಾದರೂ ಹೈದರಾಬಾದ್ ಅದೃಷ್ಟ ಬದಲಾಗಲಿಲ್ಲ

ಮುಂಬೈ| Krishnaveni K| Last Modified ಸೋಮವಾರ, 3 ಮೇ 2021 (09:12 IST)
ಮುಂಬೈ: ರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯಕ್ಕೆ ಬದಲಾದ ನಾಯಕತ್ವದೊಂದಿಗೆ ಕಣಕ್ಕಿಳಿದರೂ ಸನ್ ರೈಸರ್ಸ್ ಹೈದರಾಬಾದ್ ಅದೃಷ್ಟ ಬದಲಾಗಲಿಲ್ಲ.

 
ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಹೈದರಾಬಾದ್ 55 ರನ್ ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಜೋಸ್ ಬಟ್ಲರ್ 64 ಎಸೆತಗಳಲ್ಲಿ 124 ಸಿಡಿಸಿದರು. ಸಂಜು ಸ್ಯಾಮ್ಸನ್ 48 ರನ್ ಗಳ ಕೊಡುಗೆ ನೀಡಿದರು.
 
ಈ ಮೊತ್ತ ಬೆನ್ನತ್ತಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮನೀಶ್ ಪಾಂಡೆ 31, ಜಾನಿ ಬೇರ್ ಸ್ಟೋ 30 ರನ್ ಗಳಿಸಿದರು. ನೂತನ ನಾಯಕ ಕೇನ್ ವಿಲಿಯಮ್ಸನ್ 21 ರನ್ ಗಳಿಸಿದರು.
ಇದರಲ್ಲಿ ಇನ್ನಷ್ಟು ಓದಿ :