ಐಪಿಎಲ್ 14: ದೈತ್ಯ ಮುಂಬೈಗೆ ಕೊನೆಯ ಸ್ಥಾನಿ ಹೈದರಾಬಾದ್ ಸವಾಲು

ಮುಂಬೈ| Krishnaveni K| Last Modified ಮಂಗಳವಾರ, 4 ಮೇ 2021 (09:20 IST)
ಮುಂಬೈ: ರಲ್ಲಿ ಇಂದು ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

 
ಈಗಾಗಲೇ ಸೋತು ಸುಣ್ಣವಾಗಿರುವ ಜೊತೆಗೆ ನಾಯಕತ್ವದ ಬದಲಾವಣೆಯಾಗಿರುವ ಗೊಂದಲದಲ್ಲಿರುವ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರಿಂದಾಗಿ ಹೈದರಾಬಾದ್ ಗೆ ಮುಂಬೈ ದೊಡ್ಡ ಸವಾಲಾಗಲಿದೆ.
 
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿರನ್ ಪೊಲ್ಲಾರ್ಡ್ ಸಾಹಸದಿಂದ ಗೆದ್ದ ಮುಂಬೈಗೆ ಈಗ ಹೈದರಾಬಾದ್ ಸುಲಭ ಸವಾಲಾಗಬಹುದು. ಅಲ್ಲದೆ, ಅಂಕಪಟ್ಟಿಯಲ್ಲಿ ಇನ್ನಷ್ಟು ಮೇಲೇರಲು ಮುಂಬೈಗೆ ಈ ಪಂದ್ಯ ಸಹಾಯವಾಗಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :